meditation ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ವಿಶ್ವ ಧ್ಯಾನ ದಿನದ ಅಂಗವಾಗಿ ಪತಂಜಲಿ ಯೋಗ ಪೀಠ ವತಿಯಿಂದ ಯೋಗಗುರು ಭವರಲಾಲ್ ಆರ್ಯ ಅವರು ಧ್ಯಾನ ಶಿಬಿರ ನಡೆಸಿದರು.
ಹುಬ್ಬಳ್ಳಿ: meditation ಇಲ್ಲಿಯ ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ವಿಶ್ವ ಧ್ಯಾನ ದಿನಾಚರಣೆ ಅಂಗವಾಗಿ ಪತಂಜಲಿ ಯೋಗ ಪೀಠ ವತಿಯಿಂದ ಸಾಮೂಹಿಕ ಸತ್ಸಂಗ ಹಾಗೂ ವಿಶೇಷ ಓಂಕಾರ ಧ್ಯಾನ ಶಿಬಿರ ನಡೆಯಿತು.
ಸಿದ್ಧಾರೂಢ ಸ್ವಾಮಿಗಳ ಆರತಿಯಲ್ಲಿ ಭಾಗಿಯಾಗಿ ಸತ್ಸಂಗ ನೆರವೇರಿಸಿದ ನಂತರ ಯೋಗ, ಪ್ರಾಣಾಯಾಮ ಮಾಡಲಾಯಿತು.
ಪತಂಜಲಿ ಯೋಗ ಪೀಠ ಕರ್ನಾಟಕ ವರಿಷ್ಠ ರಾಜ್ಯ ಪ್ರಭಾರಿ ಅಂತಾರಾಷ್ಟ್ರೀಯ ಯೋಗಗುರು ಭವರಲಾಲ್ ಆರ್ಯ ಅವರು ಯೋಗ ಧ್ಯಾನ ಮಾರ್ಗದರ್ಶನ ಮಾಡಿದರು.
ಓಂಕಾರ ಧ್ಯಾನದಿಂದ ಅಷ್ಟ ಚಕ್ರಗಳ ಮೇಲೆ ಪ್ರಭಾವ ಬೀರಿ ಒತ್ತಡ ನಿವಾರಣೆ ಆಗುತ್ತದೆ. ಭಗವಂತನ ಹಲವು ನಾಮಗಳಲ್ಲಿ ಶ್ರೇಷ್ಠವಾದದ್ದು ಓಂಕಾರ. ಬೇರೆ ಎಲ್ಲ ನಾಮ ಉಚ್ಚಾರಣೆ ಮಾಡುವಾಗ ಅಂದರೆ ಶಿವ ಕೃಷ್ಣ ರಾಮ ಉಚ್ಚಾರಣೆ ಮಾಡುವಾಗ ನಾಲಗೆ ಉಪಯೋಗಿಸುತ್ತೇವೆ. ಆದರೆ ಓಂಕಾರ ಉಚ್ಚಾರಣೆಗೆ ಉಪಯೋಗ ಮಾಡುವುದಿಲ್ಲ ಎಂದರು.
ಓಂಕಾರದ ಅಭ್ಯಾಸದಿಂದ ಮಾನಸಿಕ ತೊಂದರೆಗಳು ಕಡಿಮೆಯಾಗುತ್ತದೆ. ನೆನಪಿನ ಶಕ್ತಿ ತುಂಬಾ ಹೆಚ್ಚಾಗುತ್ತದೆ. ಜೊತೆಗೆ ಒಂದು ಸಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ಓಂಕಾರ ಧ್ಯಾನದಿಂದ ದೇಹದ ಎಂಟು ಚಕ್ರಗಳಾದ ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ, ಅನಾಹತ (ಹೃದಯ), ವಿಶುದ್ಧಿ, ಆಜ್ಞಾ, ಸಹಸ್ರಾರ ಚಕ್ರಗಳ ಮೇಲೆ ಧ್ಯಾನ ಅಭ್ಯಾಸ ಮಾಡಿದರೆ ಪರಿಪೂರ್ಣತೆ ಕಡೆ ಸಾಗುತ್ತೇವೆ. ಓಂಕಾರ ಉಚ್ಚಾರಣೆಯಿಂದ ಶರೀರದಲ್ಲಿ ಎಂಡೋಫಿನ್, ಡೋಪಮಿನ್ ಹಾಮೋರ್ನ್ಸ್ ಉತ್ಪತ್ತಿಯಾಗುತ್ತದೆ. ನಮಗೆ ತುಂಬಾ ಆನಂದ ಸಂತೋಷ ನೀಡುತ್ತವೆ ಎಂದು ಭವರಲಾಲ್ ಆರ್ಯ ಅವರು ಹೇಳಿದರು.