ಹು-ಧಾ ಮಹಾನಗರ ಪಾಲಿಕೆಯ (Mayor election) ನೂತನ ಮೇಯರ್ ದುರ್ಗಮ್ಮ ಬಿಜವಾಡ ಹಾಗೂ ನೂತನ ಉಪ ಮೇಯರ್ ರತ್ನಾಬಾಯಿ ನಾಜರೆ.
ಹುಬ್ಬಳ್ಳಿ: ಬಿಜೆಪಿ ಆಡಳಿತವಿರುವ Mayor election) ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ದುರ್ಗಮ್ಮ ಬಿಜವಾಡ ಹಾಗೂ ಉಪ ಮೇಯರ್ ಆಗಿ ರತ್ನಾಬಾಯಿ ನಾಜರೆ ಚುನಾಯಿತರಾದರು.
ಇಲ್ಲಿಯ ಪಾಲಿಕೆ ಸಭಾಭವನದಲ್ಲಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಶನಿವಾರ ಚುನಾವಣೆ ಪ್ರಕ್ರಿಯೆ ನಡೆಸಿದರು. ದುರ್ಗಮ್ಮ ಬಿಜವಾಡ 50 ಮತಗಳನ್ನು ಪಡೆದರೆ, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಕವಿತಾ ಕಬ್ಬೇರ 35 ಮತಗಳನ್ನು ಪಡೆದರು. ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರತ್ನಾಬಾಯಿ ನಾಜರೆ 50, ಕಾಂಗ್ರೆಸ್ಸಿನ ದಿಲಷಾದ ಬೇಗಂ ನದಾಫ್ 35 ಹಾಗೂ ಎಐಎಂಐಎಂ ನಿಂದ ಸ್ಪರ್ಧಿಸಿದ್ದ ವಹಿದಾಖಾನಂ ಕಿತ್ತೂರ 3 ನಾಮಗಳನ್ನು ಪಡೆದರು. ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿತ್ತು.
ಮೂವರು ಸದಸ್ಯರನ್ನು ಹೊಂದಿರುವ ಎಐಎಂಐಎಂ ಪಕ್ಷ ಯಾರಿಗೂ ಬೆಂಬಲ ಸೂಚಿಸಿಲ್ಲ. ಪರಿಶಿಷ್ಟ ಜಾತಿ ಮಹಿಳೆ ಅಭ್ಯರ್ಥಿ ಇಲ್ಲದ ಕಾರಣ ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡಿರಲಿಲ್ಲ. ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ವಹಿದಾಖಾನಂ ಕಿತ್ತೂರ, ಅವರದ್ದು ಸೇರಿದಂತೆ ಪಕ್ಷದ ಇನ್ನಿಬ್ಬರು ಸದಸ್ಯರ ಮತಗಳನ್ನು (ಒಟ್ಟು 3) ಪಡೆದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಎಸ್.ಎಸ್. ಬಿರಾದಾರ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ತಹಸೀಲ್ದಾರ್ ಮಹೇಶ ಗಸ್ತೆ ಇದ್ದರು.