"ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಮಹಿಳಾ ಗ್ರಂಥ ಬಹುಮಾನ ಪ್ರದಾನ
ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಮಹಿಳಾ ಗ್ರಂಥ ಬಹುಮಾನ- 2024 ಪ್ರದಾನ ಮಾಡಲಾಯಿತು.
ಶಿವಮೊಗ್ಗದ ಸವಿತಾ ನಾಗಭೂಷಣ ಅವರ "ದಿನದ ಪ್ರಾರ್ಥನೆ' ಕವನ ಸಂಕಲನ, ಉಡುಪಿಯ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ "ತಂಬೂರಿ' ಕವನ ಸಂಕಲನ, ಶಿವಮೊಗ್ಗದ ಡಾ. ಕೆ.ಎಸ್. ಪವಿತ್ರಾ ಅವರ "ಧೀತನನ!' ಕಲೆ- ಸಾಹಿತ್ಯ- ಮನಸ್ಸು ಇತರೆ ಕೃತಿಗೆ ಧಾರವಾಡ ಎಸ್ಡಿಎಂ ಸಂಸ್ಥೆಯ ಜೀವಂಧರ ಕುಮಾರ ಮಹಿಳಾ ಗ್ರಂಥ ಬಹುಮಾನ ಪ್ರದಾನ ಮಾಡಿದರು.
ಇದೇವೇಳೆ ಬೆಂಗಳೂರಿನ ರೇಣುಕಾ ಕೋಡಗುಂಟಿ ಅವರ "ಚಿಗುರೊಡೆದ ಬೇರು' ಕಥಾ ಸಂಕಲನ ಮತ್ತು ಮೈಸೂರಿನ ಗೀತಾ ಸೀತಾರಾಮ ಅವರ "ಅಹಲ್ಯಾಬಾಯಿ ಹೋಳ್ಕರ್' ಕಾದಂಬರಿಗೆ ಗೈರುಹಾಜರಿಯಲ್ಲಿ ಗ್ರಂಥ ಬಹುಮಾನ ಪ್ರದಾನ ಮಾಡಲಾಯಿತು. ಗ್ರಂಥ ಬಹುಮಾನ ತಲಾ 15 ಸಾವಿರ ರೂಪಾಯಿ ನಗದು ಒಳಗೊಂಡಿದೆ.
ಡಾ. ವೈ.ಎಂ. ಯಾಕೊಳ್ಳಿ ಕವನ ಸಂಕಲನಗಳ ಕುರಿತು, ಡಾ. ಶರಣಮ್ಮ ಗೋರೇಬಾಳ ಕಾದಂಬರಿ, ನಾಟಕ ಕುರಿತು ಹಾಗೂ ಡಾ. ಎಚ್.ಬಿ. ಕೋಲಕಾರ ಕಥಾ ಸಂಕಲನ ಕುರಿತು ಮತ್ತು ಡಾ. ಶ್ರೀಧರ ಹೆಗಡೆ ಭದ್ರನ್ ಇತರೆ ಲೇಖನಗಳ ಕುರಿತು ನಿರ್ಣಾಯಕರ ಪರ ನುಡಿಗಳನ್ನಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂದ ಗೌರವ ಉಪಾಧ್ಯ ಶ್ರೀನಿವಾಸ ವಾಡಪ್ಪಿ ಅಧ್ಯತೆ ವಹಿಸಿದ್ದರು.