math hawkers ಹುಬ್ಬಳ್ಳಿಯ ಮೂರುಸಾವಿರ ಮಠ ಮಹಾರಥದ ಮುಂದೆ ಪತ್ರಿಕಾ ವಿತರಕರನ್ನು ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವತಿಯಿಂದ ಸನ್ಮಾನಿಸಲಾಯಿತು. 
ಧಾರವಾಡ

math hawkers ಮಹಾರಥದ ಮುಂದೆ ಪತ್ರಿಕಾ ವಿತರಕರಿಗೆ ಸನ್ಮಾನ

ಹುಬ್ಬಳ್ಳಿ: math hawkers ಪತ್ರಿಕಾ ವಿತರಕರ ದಿನಾಚರಣೆ ನಿಮಿತ್ತ ಇಲ್ಲಿಯ ಮೂರು ಸಾವಿರ ಮಠದ ರಥದ ಮುಂಭಾಗದಲ್ಲಿ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವತಿಯಿಂದ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು.
ಸಮಾಜ ಸೇವಕಿ ಹಾಗೂ ಮಹಾಮಂಡಳದ ಮಹಿಳಾ ವಿಭಾಗದ ಮುಖ್ಯಸ್ಥೆ ಅನಿತಾ ಜಡಿ ಅವರು ಪತ್ರಿಕಾ ವಿತರಕರನ್ನು ಸನ್ಮಾನಿಸಿ ಮಾತನಾಡಿ, ಬೆಳಗ್ಗೆ ಬೇಗ ಎದ್ದು ಮಳೆ, ಚಳಿ ಎನ್ನದೆ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸುವ ವಿತರಕರ ಸೇವೆ ಶ್ಲಾಘನೀಯವಾದುದು ಎಂದರು.
ಇವರ ಶ್ರಮ ಇನ್ನೊಬ್ಬರ ಜ್ಞಾನ ಅಭಿವೃದ್ಧಿಗೆ ನೆರವಾಗುತ್ತದೆ. ಪತ್ರಿಕೆ ಮತ್ತು ಸಮಾಜದ ಮಧ್ಯೆ ಕೊಂಡಿಯಾಗಿ ಇವರು ಕೆಲಸ ಮಾಡುತ್ತಾರೆ ಎಂದು ನುಡಿದರು.
ಪತ್ರಿಕೆ ವಿತರಕರಾದ ಮಲ್ಲೇಶಪ್ಪ ಹನಿ, ವೆಂಕಟೇಶ ಕಲಬುರ್ಗಿ, ಸಮಾಜ ಸೇವಕ ಬಾಳಪ್ಪ ತೋರಗಲ್ಲ ಇವರನ್ನು ಸನ್ಮಾನಿಸಲಾಯಿತು.
ಮಹಾಮಂಡಳದ ಅಮರೇಶ ಹಿಪ್ಪರಗಿ, ಎಸ್​.ಎಸ್​. ಕಮಡೊಳ್ಳಿಶೆಟ್ಟರ, ರವೀಂದ್ರ ಹಳಿಜೋಳ, ಚಂದ್ರಶೇಖರ ಗಾಣಿಗೇರ, ಸುವರ್ಣ ಹಳಿಜೋಳ, ರೂಪಾ ಅಂಗಡಿ, ಡಾ. ಮಂಜುಳಾ ಕಮ್ಮಾರ, ಗೀತಾ ಕಾಟಿಗರ, ಸರೋಜ ಛಬ್ಬಿ, ರೇಖಾ ನಾರಾ, ರೇಖಾ ಏಕಬೋಟೆ, ಸರಸ್ವತಿ ಮೆಹರವಾಡೆ, ವಿಜಯಾ ಏಕಬೋಟೆ, ರತ್ನಾ ಬಸಾಪೂರ, ಸಂಗೀತ ಇಜಾರದ, ಪಾರ್ವತಿ ಹಿರೇಮಠ.
ಸುವರ್ಣ ಹಾನಗಲ್ಲ, ಅಕ್ಕಮ್ಮಅಂದೇಲಿಮಠ, ಸಂಗೀತ ದೇವದಾಸ, ಸಂಗೀತ ಜಡಿ, ಗೀತಾ ನಿರಂಜನ, ಲಕ್ಷ್ಮೀ ಮಗಜಿಕೊಂಡಿ, ಪೂನಮ್​ ಬಸವಾ ಇತರರು ಉಪಸ್ಥಿತರಿದ್ದರು. ರಾಜು ಕರಕಣ್ಣವರ ಸ್ವಾಗತಿಸಿದರು. ಆಶಾ ಪತ್ತಾರ ನಿರೂಪಿಸಿದರು. ರೇಖಾ ಆಪ್ಟೆ ವಂದಿಸಿದರು.