RPF ರೈಲುಗಳಲ್ಲಿ ಸಾಗಿಸುತ್ತಿದ್ದ ಮಾದಕ ವಸ್ತುಗಳೊಂದಿಗೆ ಆರೋಪಿಗಳನ್ನು ಬಂಧಿಸಿದ ಆರ್​ಪಿಎಫ್ ಸಿಬ್ಬಂದಿ. 
ಧಾರವಾಡ

ಆರ್​ಪಿಎಫ್​ನಿಂದ ಭರ್ಜರಿ ಕಾರ್ಯಾಚರಣೆ RPF

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • 33 ಮಕ್ಕಳ ರಕ್ಷಣೆ, 12.5 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ವಶಕ್ಕೆ
  • ನನ್ಹೆ ಫರಿಸ್ತೆ ಕಾರ್ಯಾಚರಣೆ
  • ರೈಲುಗಳಿಗೆ ಆರ್​ಪಿಎಫ್ ಸಿಬ್ಬಂದಿ ಬೆಂಗಾವಲು
ನನ್ಹೆ ಫರಿಸ್ತೆ ಕಾರ್ಯಾಚರಣೆ ಅಡಿ ಆರ್​ಪಿಎಫ್ ಸಿಬ್ಬಂದಿ 6 ಜನ ಬಾಲಕಿಯರು ಸೇರಿದಂತೆ 33 ಮಕ್ಕಳನ್ನು ರಕ್ಷಿಸಿದ್ದು, ಮಕ್ಕಳನ್ನು ಅವರ ಕುಟುಂಬಗಳಿಗೆ ಒಪ್ಪಿಸಲಾಗಿದೆ.
ರೈಲು ಟಿಕೆಟ್​ಗಳ ಕಾಳಸಂತೆ ಮಾರಾಟ ತಡೆಯುವುದಕ್ಕಾಗಿ ಕಾರ್ಯಾಚರಣೆ ನಡೆಸಿ, 12 ಪ್ರಕರಣಗಳಲ್ಲಿ 12 ಜನ ಟಿಕೆಟ್ ದಲ್ಲಾಳಿಗಳನ್ನು ಬಂಧಿಸಲಾಯಿತು.
53 ಸಾವಿರ ರೂ. ಮೌಲ್ಯದ 18 ಬಳಕೆಯಾಗದ ಟಿಕೆಟ್​ಗಳನ್ನು ಹಾಗೂ 2.32 ಲಕ್ಷ ರೂ. ಮೌಲ್ಯದ 56 ಬಳಸಿದ ಟಿಕೆಟ್​ಗಳನ್ನು ಆಪರೇಷನ್ ಸತರ್ಕ್ ಕಾರ್ಯುಚರಣೆ ಅಡಿ ಆರ್​ಪಿಎಫ್ 8 ಮದ್ಯ ಪ್ರಕರಣಗಳನ್ನು ಪತ್ತೆಹಚ್ಚಿದ್ದು, 55,162 ರೂ. ಮೌಲ್ಯದ 154 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದೆ.
ವಶಪಡಿಸಿಕೊಂಡ ಮದ್ಯವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಆಪರೇಷನ್ ನಾರ್ಕೆ ಅಡಿ 8 ಪ್ರಕರಣಗಳನ್ನು ಪತ್ತೆ ಹಚ್ಚಿ, 12.5 ಕೋಟಿ ರೂ. ಮೌಲ್ಯದ 127.5 ಕೆಜಿ. ಗಾಂಜಾ ವಶಪಡಿಸಿಕೊಳ್ಳಲಾಯಿತು.
ಇದರಲ್ಲಿ 14.98 ಕೆ.ಜಿ. ಆಂಫೆಟಮೈನ್, 11.98 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡ ಒಂದು ಪ್ರಕರಣವೂ ಸೇರಿದೆ. ಈ ಪ್ರಕರಣದಲ್ಲಿ ಮೂವರು ಸೇರಿ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ.
20 ಕೆ.ಜಿ. ತೂಕದ 28,460 ರೂ. ಮೌಲ್ಯದ ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದ ಒಂದು ಪ್ರಕರಣ ಪತ್ತೆ ಹಚ್ಚಲಾಗಿದೆ.
ಪ್ರಯಾಣಿಕರು ಬಿಟ್ಟು ಹೋಗಿರುವ ಲ್ಯಾಪ್​ಟಾಪ್​ಗಳು, ಮೊಬೈಲ್ ಫೋನ್​ಗಳು, ಆಭರಣಗಳು ಸೇರಿದಂತೆ 66.41 ಲಕ್ಷ ರೂ. ಮೌಲ್ಯದ ಇತರ ವೈಯಕ್ತಿಕ ವಸ್ತುಗಳನ್ನು ವಶಪಡಿಸಿಕೊಂಡು ಅವುಗಳ ವಾರಸುದಾರರಿಗೆ ಹಿಂತಿರುಗಿಸಲಾಗಿದೆ.
ನೈಋತ್ಯ ರೈಲ್ವೆ ವಲಯದಾದ್ಯಂತ ನಿತ್ಯ 36-40 ಎಕ್ಸ್​ಪ್ರೆಸ್ ಮತ್ತು ವಿಶೇಷ ರೈಲುಗಳಿಗೆ ಸುಮಾರು 130 ಆರ್​ಪಿಎಫ್ ಸಿಬ್ಬಂದಿ ಬೆಂಗಾವಲು ನೀಡುತ್ತಿದ್ದಾರೆ.
ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರು ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.