ಹುಬ್ಬಳ್ಳಿ: ರೋಟರಿ ಕ್ಲಬ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಶಿರಡಿನಗರದಲ್ಲಿರುವ ಶ್ರೀ ಶಿರಡಿ ಸಾಯಿ ಕಲ್ಯಾಣ ಮಂಟಪದಲ್ಲಿ ಮೂರು ಬಡ ಕುಟುಂಬದ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿತು.
ಹುಬ್ಬಳ್ಳಿಯ ರೋಟರಿ ಕ್ಲಬ್ ಪ್ರತಿ ವರ್ಷ ಆರ್ಥಿಕವಾಗಿ ಹಿಂದುಳಿದ ಜೋಡಿಗಳ ವಿವಾಹಕ್ಕೆ ನೆರವಾಗುತ್ತಿದೆ. ಅದರಂತೆ ಇಂದು ಸಾಂಪ್ರದಾಯಿಕ ಹಿಂದೂ ವಿವಾಹ ವಿಧಿವಿಧಾನಗಳು ಮತ್ತು ಆಚರಣೆಗಳೊಂದಿಗೆ ಮೂರು ಜೋಡಿಗೆ ಮದುವೆ ಮಾಡಲಾಯಿತು.
ವಿಶೇಷ ಎಂದರೆ ಜಿಲ್ಲಾಧಿಕಾರಿ ಸ್ನೇಹಲ್ ಅವರು ಉಪಸ್ಥಿತರಿದ್ದು, ನವ ದಂಪತಿಗಳಿಗೆ ಉಡುಗೊರೆ ನೀಡಿ ಶುಭ ಹಾರೈಸಿದರು. ಸಿದ್ರಾಮಪ್ಪ ಮತ್ತು ನೇತ್ರಾ, ದೇವರಾಜ ಮತ್ತು ಐಶು, ಪ್ರಶಾಂತ ಮತ್ತು ಆಯೇಷಾ ಅವರು ವಿವಾಹ ಬಂಧನಕ್ಕೆ ಒಳಗಾದರು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಜಿತೇಂದ್ರ ಪಾಂಚಾಲ್ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಸೇವಾ ವಿಭಾಗದ ನಿರ್ದೇಶಕ ಮಂಜುನಾಥ ಹೊಂಬಳ ಮೇಲ್ವಿಚಾರಣೆ ಮಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀಕ್ಷಕಿ ಮೈತ್ರಾ ರಡ್ಡೇರ, ಉಪ ನಿರ್ದೇಶಕ ವೀರನಗೌಡ ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಲ್ಲಪ್ಪ ಬಡಿಗೇರ ಮತ್ತು ವಿಜಯಲ್ಮ ಪಾಟೀಲ್ ಪಾಲ್ಗೊಂಡಿದ್ದರು.
ರೋಟರಿ ಕ್ಲಬ್ನ ವಸಂತ ಭಸ್ಮೆ, ಮೋಹಿತ ದಂಡ್, ಅಮರ ಸೂಜಿ, ಪ್ರೇಮಚಂದ್ರನ, ಮನೀಶ ಜೈನ್, ಅಯ ಮೆಹರವಾಡೆ, ಪ್ರಶಾಂತ ಹೆಬಸೂರ, ಅರವಿಂದ ಕುಬಸದ, ಸುರೇಂದ್ರ ಪೋರವಾಲ್, ಡಾ. ಮುದರಡ್ಡಿ, ಎ.ವಿ. ಸಂಕನೂರ, ಸಹನಾ ಪೈಕೋಟಿ ಉಪಸ್ಥಿತರಿದ್ದರು.