mass marriage ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಶಾಸಕ ಮಹೇಶ ಟೆಂಗಿನಕಾಯಿ, ಕೃಷ್ಣ ಗಂಡಗಾಳೇಕರ, ರಮೇಶ ಪಾಟೀಲ, ಸುಭಾಸಸಿಂಗ್ ಜಮಾದಾರ, ಲಿಂಗರಾಜ ಪಾಟೀಲ, ಸಂತೋಷ ವೆರ್ಣೇಕರ, ರಮೇಶ ಮಹಾದೇವಪ್ಪನವರ, ಇತರರು ಇದ್ದರು.
- ನೂತನ ವಧುವರರಿಗೆ ಗಣ್ಯರ ಸಲಹೆ
- ಸಹನೆಯಿಂದ ಎಲ್ಲರ ಮನ ಗೆಲ್ಲಿ
- ಹುಬ್ಬಳ್ಳಿಯಲ್ಲಿ ಸಾಮೂಹಿಕ ವಿವಾಹ ಸಮಾರಂಭ
ಹುಬ್ಬಳ್ಳಿ: mass marriage ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹಾಗೂ ಕೃಷ್ಣ ಗಂಡಗಾಳೇಕರ ನೇತೃತ್ವದ ನವಯುಗ ಸಂಘಟನೆ ಆಶ್ರಯದಲ್ಲಿ ನಗರದ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಭಾನುವಾರ ಸಾಮೂಹಿಕ ವಿವಾಹ ಸಮಾರಂಭ ಸಂಭ್ರಮದಿಂದ ನಡೆಯಿತು.
ಕಳೆದ 24 ವರ್ಷಗಳಿಂದ ಸರ್ವಧರ್ಮ ಉಪನಯನ ಹಾಗೂ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತ ಬರಲಾಗಿದ್ದು, ಅದರಂತೆ ಭಾನುವಾರ 36 ಉಪನಯನ ಹಾಗೂ ಮಧ್ಯಾಹ್ನ 17 ಜೋಡಿ ಸಾಮೂಹಿಕ ವಿವಾಹಗಳನ್ನು ನೆರವೇರಿಸಲಾಯಿತು.
ಹೊಸ ಮನೆ ಪ್ರವೇಶ ಮಾಡುವ ವಧು ತಮ್ಮ ಅತ್ತೆ-ಮಾವಂದಿರನ್ನು ತಂದೆ- ತಾಯಿಯಂತೆ ಕಂಡು ಅವರೊಂದಿಗೆ ಸಹನೆಯಿಂದ ವತಿರ್ಸಬೇಕು. ಅವರು ಸಹ ನವಜೋಡಿಗಳನ್ನು ಮಕ್ಕಳಂತೆ ಕಾಣಬೇಕು. ಇದರಿಂದ ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರದಿಪ ಶೆಟ್ಟರ್, ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹ ಕಾರ್ಯಕ್ರಮವು ಮಾದರಿ ಕೆಲಸವಾಗಿದೆ. ಧರ್ಮದ ತಳಹದಿ ಅರಿತು ಜೀವನ ನಡೆಸುವುದು ತುಂಬಾ ಮುಖ್ಯ ಎಂದರು.
ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ರಮೇಶ ಪಾಟೀಲ, ಜಯತೀರ್ಥ ಕಟ್ಟಿ, ಸಿದ್ದು ಮೊಗಲಿಶೆಟ್ಟರ, ಸುಭಾಸಸಿಂಗ್ ಜಮಾದಾರ, ಸಂತೋಷ ವೆರ್ಣೇಕರ, ಆನಂದ ಗುರುಸ್ವಾಮಿ, ಸುಬ್ರಮಣ್ಯ ಶಿರಕೋಳ, ತೋಟಪ್ಪ ನಿಡಗುಂದಿ, ರವಿ ನಾಯಕ, ಸೀಮಾ ಲದವಾ, ರಮೇಶ ಮಹದೇವಪ್ಪನವರ, ಸಂತೋಷ ವೆರ್ಣೇಕರ, ಅಕ್ಕಮ್ಮ ಹೆಗಡೆ, ಮೊದಲಾದವರು ಉಪಸ್ಥಿತರಿದ್ದರು.