marwadi munch ಮಾರ್ವಾಡಿ ಯುವ ಮಂಚ್ ಹುಬ್ಬಳ್ಳಿ ಶಾಖೆ ವತಿಯಿಂದ ಹುಬ್ಬಳ್ಳಿಯ ಸೇವಾ ಸದನದಲ್ಲಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ನೋಟ್‌ಬುಕ್ ವಿತರಿಸಲಾಯಿತು.
ಹುಬ್ಬಳ್ಳಿ: ಮಾರ್ವಾಡಿ ಯುವ ಮಂಚ್ marwadi munch ಹುಬ್ಬಳ್ಳಿ ಶಾಖೆ ವತಿಯಿಂದ ‘ಆನಂದ ಎಲ್ಲರಿಗಾಗಿ’ ಸೇವಾ ಅಭಿಯಾನ ನಿಮಿತ್ತ ಇಲ್ಲಿಯ ಕೇಶ್ವಾಪುರದ ಸೇವಾ ಸದನದಲ್ಲಿ ಇತ್ತೀಚೆಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕ್ಲಾಥ್ ಮರ್ಚೆಂಟ್ ಅಸೋಸಿಯೇಷನ್ ಹುಬ್ಬಳ್ಳಿಯ ಪ್ರಧಾನ ಕಾರ್ಯದರ್ಶಿ ರಾಕೇಶ ಕಟಾರಿಯಾ ಮಾತನಾಡಿ, ಸಂಪನ್ಮೂಲ ಕೊರತೆಯಿಂದ ಮಕ್ಕಳು ಶಿಕ್ಷಣದಿಂದ ಹಿಂದುಳಿಯಬಾರದು. ಹಾಗಾಗಿಯ ಮಾರ್ವಾಡಿ ಯುವ ಮಂಚ್ ದೇಶಾದ್ಯಂತ ವಿವಿಧ ಸೇವಾ ಯೋಜನೆಗಳನ್ನು ಆಯೋಜಿಸುತ್ತಿದೆ ಎಂದರು.
ಸೇವಾ ಭಾರತಿ ಟ್ರಸ್ಟ್‌ನ ಪ್ರಾಂತೀಯ ಖಜಾಂಚಿ ಭರತ ಜೈನ್ ಮಾತನಾಡಿ, ಶಿಕ್ಷಣವೇ ಮಕ್ಕಳ ಉಜ್ವಲ ಭವಿಷ್ಯದ ಕೀಲಿಕೈ ಎಂದು ಹೇಳಿದರು.
ಶಾಖಾಧ್ಯಕ್ಷ ಅಮರ್ ವೈಷ್ಣವ್ ಮಾತನಾಡಿದರು.
ಪ್ರಾಜೆಕ್ಟ್ ಚೇರ್ಮನ್ ಸುಭಾಷಚಂದ್ರ ಡಂಕ್, ಕಿರಣ ಜೈನ್, ಪಿಯೂಷ್ ಪಾಲರೇಚಾ, ವಿಜಯರಾಜ್‌ಸಿಂಗ್ ರಾಜಪುರೋಹಿತ, ಇತರರಿದ್ದರು.