marijuana ಶಹರ ಪೊಲೀಸ್ ಠಾಣೆ 
ಧಾರವಾಡ

marijuana ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ವಶಕ್ಕೆ

ಮರಿದೇವ ಹೂಗಾರ
ಹುಬ್ಬಳ್ಳಿ: ಇಲ್ಲಿಯ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದ ರಸ್ತೆ ಮೇಲೆ marijuana ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಣದಮ್ಮ ಕಾಲನಿಯ ಮಾಂತೇಶ ಹೊಸಮನಿ, ತಿಮ್ಮಸಾಗರ ರೋಡ್ ಧಾರವಾಡ ಕಾಲನಿಯ ಅಲಿಣಾ ನೂರುಲ್ಲಾ, ತೊರವಿಹಕ್ಕಲದ ಫಯಾಜ್ ಗೂಂಟವಾಲೆ, ನೂರಾನಿ ಪ್ಲಾಟ್‌ನ ಸೊಯಬ್ ಧಾರವಾಡ ಪೊಲೀಸರ ವಶದಲ್ಲಿದ್ದಾರೆ. ಒಟ್ಟು 1.53 ಲಕ್ಷ ರೂ. ಮೌಲ್ಯದ 6.135 ಕೆಜಿ ಗಾಂಜಾ, 4 ಮೊಬೈಲ್ ಫೋನ್, ಸಾವಿರ ರೂ. ನಗದು, 1 ದ್ವಿಚಕ್ರವಾಹನ ವಶಕ್ಕೆ ಪಡೆದಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.