marchants meet ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಏರ್ಪಡಿಸಿದ್ದ ಜಂಟಿ ಸಭೆಯಲ್ಲಿ ವ್ಯಾಪಾರಸ್ಥರ ಸಂಘ ಹಾಗೂ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಮಾರುಕಟ್ಟೆಯ ಮೂಲಭೂತ ಸೌಲಭ್ಯಗಳು, ವ್ಯಾಪಾರ ಅಭಿವೃದ್ಧಿ, ಮಾರುಕಟ್ಟೆಯ ಸರ್ವತೋಮುಖ ಬೆಳವಣಿಗೆ ಕುರಿತು ಚರ್ಚಿಸಲಾಯಿತು.
ಕೆಸಿಸಿಐ ವತಿಯಿಂದ ಎಪಿಎಂಸಿ ಬಳಿಯ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ಬೃಹತ್ ಕೈಗಾರಿಕಾ ವಸ್ತು ಪ್ರದರ್ಶನ ಇನ್ಕಾಮೆಕ್ಸ್- 2026 ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ವರ್ತಕರು ಇದರಲ್ಲಿ ಭಾಗವಹಿಸಿ ಸಿಎಂ ಭೇಟಿ ಮಾಡಿ ಬೇಡಿಕೆಗಳನ್ನು ಸಲ್ಲಿಸಿ ಪ್ರಯೋಜನ ಪಡೆಯಬೇಕು ಎಂದು ತಿಳಿಸಲಾಯಿತು.
ಸಂಘದ ಉಪಾಧ್ಯಕ್ಷ ಶ್ರೀನಿವಾಸ ಸೋಳಂಕಿ, ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ, ಸಹಗೌರವ ಕಾರ್ಯದರ್ಶಿ ಚಂದ್ರಶೇಖರ ಪೂಜಾರ, ಕೆಸಿಸಿಐ ಉಪಾಧ್ಯಕ್ಷರಾದ ಪ್ರವಿಣ ಅಗಡಿ, ಎಸ್.ಜಿ. ಕಮ್ಮಾರ, ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿ ಉದಯ ರೇವಣಕರ, ಸಹಗೌರವ ಕಾರ್ಯದರ್ಶಿ ಪ್ರಕಾಶ ಶಂಗೇರಿ, ಸಂದೀಪ ಬಿಡಸಾರಿಯಾ, ಪ್ರಕಾಶ ಲಿಂಬಯ್ಯಸ್ವಾಮಿಮಠ, ಪ್ರಕಾಶ ಟೆಂಗಿನಕಾಯಿ, ಸಂಘದ ಮಾಜಿ ಅಧ್ಯಕ್ಷರಾದ ಗಂಗಾಧರ ಬೆಲ್ಲದ, ರಾಜಣ್ಣ ಬತ್ಲಿ, ಗಂಗನಗೌಡ ಪಾಟೀಲ, ಬಸವರಾಜ ಯಕಲಾಸಪುರ, ಆಹಾರಧಾನ್ಯ ವರ್ತಕರ ಸಂದ ಅಧ್ಯಕ್ಷ ಚನ್ನು ಹೊಸಮನಿ, ವಿನೋದ ತಲ್ಲೂರ, ಈಶ್ವರಪ್ಪ ಹೆಬಸೂರ, ಸಿದ್ದು ಅಳಗವಾಡಿ, ಶಿವಯೋಗಿ ಹೊಸಕಟ್ಟಿ, ಮುಂತಾದವರು ಭಾಗವಹಿಸಿದ್ದರು.