ಹುಬ್ಬಳ್ಳಿಯ ಭವಾನಿ ನಗರದ (mantralayasree)ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾ ಮಠಕ್ಕೆ ಮಂತ್ರಾಲಯ ರಾಯರಮಠದ ಮಠಾಧೀಶ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರು ಶನಿವಾರ ಭೇಟಿ ನೀಡಿ ಆಶೀರ್ವಚನ ನೀಡಿದರು. 
ಧಾರವಾಡ

(mantralayasree) ಶ್ರೀಸುಶಮೀಂದ್ರ ತೀರ್ಥರ ಜನ್ಮ ಶತಮಾನೋತ್ಸವ

ಹುಬ್ಬಳ್ಳಿ: ಇಲ್ಲಿಯ ಭವಾನಿ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ (mantralayasree) ಶಾಖಾ ಮಠಕ್ಕೆ ಮಂತ್ರಾಲಯ ರಾಯರಮಠದ ಮಠಾಧೀಶ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರು ಶನಿವಾರ ಭೇಟಿ ನೀಡಿ, ಭಕ್ತರಿಗೆ ಮುದ್ರ ಧಾರಣೆ, ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು.
ನಂತರ ಆಶೀರ್ವಚನ ನೀಡಿದ ಶ್ರೀಗಳು, ಮುಂಬರುವ ದಿನಗಳಲ್ಲಿ ಗುರುಗಳಾದ ಶ್ರೀ ಸುಶಮಿಂದ್ರ ತೀರ್ಥ ಶ್ರೀಪಾದಂಗಳವರ ಜನ್ಮ ಶತಮಾನೋತ್ಸವವನ್ನು ಹುಬ್ಬಳ್ಳಿಯಲ್ಲಿ ಮಾಡಬೇಕೆಂದು ಸಂಕಲ್ಪಿಸಿದ್ದೇವೆ. ಆಗ ಐದು ದಿನ ಹುಬ್ಬಳ್ಳಿಯಲ್ಲಿದ್ದು ಪ್ರತಿ ಭಕ್ತರ ಮನೆಗೆ ಹೋಗಿ ಮುದ್ರ ಧಾರಣೆ ಮಾಡುತ್ತೇವೆ. ಶ್ರೀಮಠದಲ್ಲಿ ಸಂಜೆ ಗುರುಕುಲ ಮಾಡಬೇಕೆಂದು ಸಂಕಲ್ಪಿಸಿದ್ದೇವೆ. ಧರ್ಮಾಚರಣೆ ಯುವ ಪೀಳಿಗೆಯವರು ಆಚರಿಸಲು ಮುಂದಾಗಬೇಕೆಂದು ಸದುದ್ದೇಶವಿಟ್ಟುಕೊಂಡು ಗುರುಕುಲ ಮಾಡಬೇಕೆಂದು ನಿಶ್ಚಯಿಸಿದ್ದೇವೆ. ಹು-ಧಾ ಅವಳಿ ನಗರದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕೆಂದು ಇಚ್ಛಿಸಿದ್ದೇವೆ. ಶ್ರೀ ಮಠದಲ್ಲಿ ನಿರಂತರ ಜ್ಞಾನ-ಯಜ್ಞ, ಭಜನೆ ನಡೆಯಬೇಕೆಂಬ ಹಂಬಲ ನಮ್ಮಲ್ಲಿದೆ ಎಂದರು.
ಶ್ರೀಮಠದ ವ್ಯವಸ್ಥಾಪಕ ಜೋಯಿಸ ಹುಲಿರಾಜ್ ಆಚಾರ್, ಅರ್ಚಕರಾದ ಗುರುರಾಜ ಆಚಾರ, ನರಹರಿ ಆಚಾರ ವಾಳೇಕರ, ಬಿ. ಎಂ. ಪುರೋಹಿತ, ಗೋಪಾಲ ಕುಲಕರ್ಣಿ, ಮನೋಹರ ಪರ್ವತಿ ಇತರರಿದ್ದರು.