manjunateshwara school ಹುಬ್ಬಳ್ಳಿಯ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನಲ್ಲಿ ಬುಧವಾರ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು.
ಹುಬ್ಬಳ್ಳಿ: ಇಲ್ಲಿಯ ಉಣಕಲ್‌ನ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನಲ್ಲಿ
ಬುಧವಾರ ನಾಗರ ಪಂಚಮಿ ಸಡಗರ ಮನೆ ಮಾಡಿತ್ತು.
ಪ್ರಾಂಶುಪಾಲೆ ಪ್ರೇರಣಾ ಪಾತ್ರ ಮಾತನಾಡಿ, ನಾಗರಪಂಚಮಿಯು ಪ್ರಕೃತಿ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧವನ್ನು ನೆನಪಿಸುತ್ತದೆ. ಪರಿಸರ ಸಂರಕ್ಷಣೆ ಹಾಗೂ ಜೀವರಾಶಿಗಳನ್ನು ಗೌರವಿಸುವುದು ಈ ಹಬ್ಬದ ಮುಖ್ಯ ಉದ್ದೇಶ ಎಂದು ವಿವರಿಸಿದರು.
ಮಕ್ಕಳು ಹಾಗೂ ಶಿಕ್ಷಕರು, ನಾಗಪ್ಪನ ಮೂರ್ತಿಗೆ ಹಾಲೆರೆದರು. ಉಂಡಿ, ಚಕ್ಕುಲಿ ನೈವೇದ್ಯ ಸಮರ್ಪಿಸಿದರು. ಕೆಲವರು ಹಾಡುಗಳನ್ನು ಹಾಡಿ ನಾಗರ ಪಂಚಮಿಯ ವೈಶಿಷ್ಟೃ ಮೆರೆದರು.
ಶಾಲೆಯ ಕನ್ನಡ ಬಳಗದವರಾದ ದೀಪಾ ಬೋರಟ್ಟಿ, ವೀಣಾ ದರ್ಗಾ, ಪ್ರಭಾವತಿ ನೇಕಾರ, ವಿದ್ಯಾ, ಬಸವರಾಜ ಹಡಗಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲೆಯ ಸಹ ಸಂಯೋಜಕರಾದ ರೇಣುಕಾ ಬಗಲಿ, ನೀಲಂ ನಗಾಡ, ಮಂಜುಳಾ ಮುದುಕಣ್ಣನವರ, ಯಶಸ್ವಿನಿ ನಾಯಕ, ಇತರರು ಇದ್ದರು.