ಮಂಗಳೂರಿನಲ್ಲಿ (Manglore Open) ನಡೆದ ಮಂಗಳೂರು ಓಪನ್ ಶೂಟಿಂಗ್ ಚಾಂಪಿಯನ್​ಷಿಪ್​ನಲ್ಲಿ ಪದಕ ಗೆದ್ದ ಹುಬ್ಬಳ್ಳಿಯ ಶೂಟರ್​ಗಳೊಂದಿಗೆ ತರಬೇತುದಾರ ರವಿಚಂದ್ರ ಬಾಲೆಹೊಸೂರ ಇದ್ದಾರೆ. 
ಧಾರವಾಡ

ಹುಬ್ಬಳ್ಳಿಯ (Manglore Open) ಶೂಟರ್​ಗಳಿಗೆ 15 ಪದಕ

ಸಂತೋಷ ವೈದ್ಯ
ಹುಬ್ಬಳ್ಳಿ: ಮಂಗಳೂರಿನಲ್ಲಿ (Manglore Open) ಇತ್ತೀಚೆಗೆ ನಡೆದ ಮಂಗಳೂರು ಓಪನ್ ಶೂಟಿಂಗ್ ಚಾಂಪಿಯನ್​ಷಿಪ್​ನಲ್ಲಿ ಹುಬ್ಬಳ್ಳಿಯ ಶೂಟರ್​ಗಳು ತಲಾ 5 ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಸೇರಿ ಒಟ್ಟು 15 ಪದಕ ಗೆದ್ದಿದ್ದಾರೆ.
ಐಎಸ್​ಎಸ್​ಎಫ್ ಪಿಸ್ತೂಲ್ ವಿಭಾಗದಲ್ಲಿ ಐಶ್ವರ್ಯ ಬಾಲೆಹೊಸೂರ್ ಚಿನ್ನ, ಜೂನಿಯರ್ ಮತ್ತು ಯೂಥ್ ವಿಭಾಗದಲ್ಲಿ ಕಂಚು, ಖುಷ್ ಪರಮಶೆಟ್ಟಿ ಮೂರು ಬೆಳ್ಳಿ ಪದಕ ಜಯಿಸಿದ್ದಾರೆ.
ಪಿಸ್ತೂಲ್ ಸೀನಿಯರ್ ವಿಭಾಗದಲ್ಲಿ ಪೃಥ್ವಿರಾಜ ಬಾಲೆಹೊಸೂರ್, ಖುಷ್ ಪರಮಶೆಟ್ಟಿ, ಮೃತ್ಯುಂಜಯ ಮಣಕವಾಡ ಅವರ ತಂಡ ಚಿನ್ನ ಗೆದ್ದಿದೆ. ರೈಫಲ್ ಸೀನಿಯರ್ ವಿಭಾಗದಲ್ಲಿ ಹರ್ಷ ಭದ್ರಾಪುರ ಕಂಚು, ಯೂಥ್ ವಿಭಾಗದಲ್ಲಿ ಬೆಳ್ಳಿ ಪದಕ, ಶ್ರೀಕರ್ ಸಬನಿಸ್ ಕಂಚಿನ ಪದಕ ಜಯಿಸಿದ್ದಾರೆ.
14 ವರ್ಷದೊಳಗಿನ ಎನ್​ಆರ್ ರೈಫಲ್ ವಿಭಾಗದಲ್ಲಿ ಕೇಶವ್ ಆದಿತ್ಯ ಬಸರಿಕೊಪ್ಪ ಚಿನ್ನ, ತಂಡ ವಿಭಾಗದಲ್ಲಿ ಕೇಶವ್ ಆದಿತ್ಯ ಬಸರಿಕೊಪ್ಪ, ನೀಲ್ ಫಡ್ನವೀಸ್, ಅನಿರುದ್ಧ ರೆಡ್ಡಿ ಚಿನ್ನ ಗೆದ್ದಿದ್ದಾರೆ. ಸಬ್ ಯೂಥ್ ತಂಡ ವಿಭಾಗದಲ್ಲಿ ಕೇಶವ್ ಆದಿತ್ಯ ಬಸರಿಕೊಪ್ಪ, ನೀಲ ಫಡ್ನವೀಸ್, ಪುನೀತ್ ಕಿರೇಸೂರ್ ಚಿನ್ನದ ಪದಕ ಜಯಿಸಿದ್ದಾರೆ.
ಪಿಸ್ತೂಲ್ ಎನ್​ಆರ್ ವಿಭಾಗದಲ್ಲಿ ಧೈರ್ಯ ಕುಲಕರ್ಣಿ ಬೆಳ್ಳಿ, ಪ್ರಶಾಂತ್ ಪವಸ್ಕರ್ ಕಂಚಿನ ಪದಕ ಗೆದ್ದಿದ್ದಾರೆ. ಶೂಟರ್​ಗಳು ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ರವಿಚಂದ್ರ ಬಾಲೆಹೊಸೂರ ಅವರ ಬಳಿ ತರಬೇತಿ ಪಡೆದಿದ್ದಾರೆ.