majethiya sewing ಹುಬ್ಬಳ್ಳಿಯಲ್ಲಿ ಭಾನುವಾರ ಮಜೇಥಿಯಾ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಪ್ರಭಾ ನಿಡವಣಿ, ಸಂಗೀತಾ ಮಾನೆ, ಗೋವಿಂದಪ್ಪ ಗೌಡಪ್ಪಗೋಳ, ಅಮರೇಶ ಹಿಪ್ಪರಗಿ, ಸುನಿಲಕುಮಾರ ಕುಕ್ಕನೂರ, ಇತರರು ಇದ್ದರು.
- ಮಜೇಥಿಯಾ ಫೌಂಡೇಷನ್ ಸಾಮಾಜಿಕ ಕಾಳಜಿ
- ಲೋಕಹಿತ ಟ್ರಸ್ಟ್ ಸಹಯೋಗ
ಹುಬ್ಬಳ್ಳಿ: majethiya sewing ಇಲ್ಲಿಯ ಮಜೇಥಿಯಾ ಫೌಂಡೇಷನ್, ಲೋಕಹಿತ ಟ್ರಸ್ಟ್ ಸಹಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬನೆಗಾಗಿ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅತಿಥಿಗಳಾಗಿದ್ದ ನಿಡವಣಿ ಫೌಂಡೇಷನ್ ಸಿಇಒ ಪ್ರಭಾ ನಿಡವಾಣಿ, ಕವಿವಿ ಸಮಾಜ ವಿಜ್ಞಾನ ವಿಭಾಗದ ಸಂಗೀತಾ ಮಾನೆ ಅವರು ಯಂತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದರು.