majethitya foundationನಿಧಾನವಾಗಿ ಕಲಿಯುವ (ಸ್ಲೋ ಲರ್ನಿಂಗ್) ಮತ್ತು ಅಂಗವಿಕಲ ವಿದ್ಯಾರ್ಥಿಗಳು ಶುಕ್ರವಾರ ಹುಬ್ಬಳ್ಳಿಯ ವಿವಿಧೆಡೆ ತೆರಳಿ ಗಣೇಶ ಮೂರ್ತಿಗಳ ದರ್ಶನ ಮಾಡಿದರು.
ಹುಬ್ಬಳ್ಳಿ: ಮಜೇಥಿಯಾ ಫೌಂಡೇಷನ್ majethitya foundation ವತಿಯಿಂದ ನಿಧಾನವಾಗಿ ಕಲಿಯುವ (ಸ್ಲೋ ಲರ್ನಿಂಗ್) ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗಾಗಿ ವಿಶೇಷ ಗಣೇಶ ದರ್ಶನ ಕಾರ್ಯಕ್ರಮವನ್ನು ನಗರದಲ್ಲಿ ಶುಕ್ರವಾರ ಅತ್ಯಂತ ವಿಜೃಂಭಣೆ ಆಯೋಜಿಸಲಾಯಿತು.
ಈ ವಿಶೇಷ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಸ್ವತಃ ಪೂಜೆ ಸಲ್ಲಿಸಿ, ಹಬ್ಬದ ಸಂಭ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದರು.
ರೋಟರಿ ಸ್ಲೋ ಲರ್ನರ್ ಶಾಲೆಯ 45, ವಿಶ್ವಧರ್ಮ ದಿವ್ಯಾಂಗ ಶಾಲೆಯ 35 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿ ಚಂದ್ರಕಲಾ ಟಾಕೀಸ್, ಮರಾಠಾ ಗಲ್ಲಿ, ದುರ್ಗದ ಬೈಲ್, ಬಾರದಾನ ಗಲ್ಲಿ ಸೇರಿದಂತೆ ಇತರೆಡೆ ಪ್ರತಿಷ್ಠಾಪನೆಯಾಗಿರುವ ಗಣೇಶ ಮೂರ್ತಿಗಳ ದರ್ಶನ ಪಡೆದು ಹರ್ಷ ವ್ಯಕ್ತಪಡಿಸಿದರು. ಜತೆಗೆ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಾರದಾನ್ ಗಲ್ಲಿಯಲ್ಲಿ ಬಾರದಾನ್ ಗಲ್ಲಿ ಗಣೇಶ ಯುವಕ ಮಂಡಳ ವತಿಯಿಂದ ಪೂಜೆಯ ನಂತರ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಹಾಗೂ ವಿಶೇಷ ಉಡುಗೊರೆಗಳನ್ನು ವಿತರಿಸಲಾಯಿತು.
ಫೌಂಡೇಷನ್ ಚೇರ್ಮನ್ ಡಾ. ಜಿತೇಂದ್ರ ಮಜೇಥಿಯಾ, ಸಿಇಒ ಸುನೀಲಕುಮಾರ ಕುಕನೂರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ಸವಿತಾ ಕಾಳೆ, ಗುರು ಲಕ್ಕಂಡಿ, ಕಾಂಚನಾ, ಇತರರು ಇದ್ದರು.