mahesh tenginakai ಶಾಸಕ ಮಹೇಶ ಟೆಂಗಿನಕಾಯಿ
- ಶಾಸಕ ಮಹೇಶ ಟೆಂಗಿನಕಾಯಿ ಪ್ರಶ್ನೆ
ಹುಬ್ಬಳ್ಳಿ: ರಾಜ್ಯ ಸರ್ಕಾರವು ಸೆ. 21ರಿಂದ ಮೂರು ದಿನಗಳವರೆಗೆ ಅಧಿವೇಶನ ಕರೆಯಲು ಉದ್ದೇಶಿಸಿದೆ. 10 ದಿನಗಳವರೆಗೆ ಅಧಿವೇಶನ ನಡೆಸಲು ಆಗುವುದಿಲ್ಲವೆಂದಾದರೆ, ಯಾವ ಪುರುಷಾರ್ಥಕ್ಕೆ ಕರೆಯುತ್ತೀರಿ? ಎಂದು mahesh tenginakai ಶಾಸಕ ಮಹೇಶ ಟೆಂಗಿನಕಾಯಿ ಪ್ರಶ್ನೆ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಳ್ಳಾರಿ ಪಾದಯಾತ್ರೆ ಆರಂಭಿಸಿದೆ. ಇದು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿದೆ. ಈ ಹಿಂದೆ ಅಧಿವೇಶನ ನಡೆಸಿದಾಗ ನಾವು ನಡೆಸಿದ್ದ ಹಗಲು-ರಾತ್ರಿ ಧರಣಿಗೆ ಮೂರು ದಿನ ಮೊದಲೇ ಅಧಿವೇಶನ ಮೊಟಕುಗೊಳಿಸಲಾಗಿತ್ತು ಎಂದು ನೆನಪು ಮಾಡಿದರು.
ಈಗ ನಡೆಸಲು ಉದ್ದೇಶಿಸಿರುವ ಅಧಿವೇಶನದಲ್ಲಿ ಪ್ರಶ್ನೆ ಕೇಳುವಂತಿಲ್ಲ ಎಂಬ ಮಾಹಿತಿ ಬಂದಿದೆ. ಗೃಹಲಕ್ಷ್ಮೀ ಯೋಜನೆಯ 7,500 ಕೋಟಿ ರೂ., ಅನ್ನಭಾಗ್ಯದ 657 ಕೋಟಿ ರೂ., ಕೆಪಿಎಸ್‌ಸಿ ಹಗರಣ, 814 ವಾಕರಸಾ ಸಂಸ್ಥೆ ಸಿಬ್ಬಂದಿ ನೇಮಕ ಸೇರಿ ಹಲವು ವಿಷಯಗಳನ್ನು ಚರ್ಚಿಸುವ ಅಗತ್ಯವಿತ್ತು. ಈಗ 3 ದಿನಗಳವರೆಗೆ ಅಧಿವೇಶನ ನಡೆಸುವ ಮೂಲಕ ಪ್ರತಿಪಕ್ಷದ ಬಾಯಿ ಮುಚ್ಚಿಸಲು ಸರ್ಕಾರ ಹೊರಟಿದೆ. ಇದು ಸಾಧ್ಯವಿಲ್ಲ. ಸರ್ಕಾರದ ಹುಳುಕುಗಳನ್ನು ಜನರ ಮುಂದೆ ತೆರೆದಿಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬಿಜೆಪಿಯವರು ಪಶ್ಚತ್ತಾಪದ ಪಾದಯಾತ್ರೆ ಕೈಗೊಂಡಿದ್ದಾರೆ ಎಂದಿದ್ದಾರೆ. ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ, ಕಾಂಗ್ರೆಸ್‌ಗೆ 2028ರಲ್ಲಿ ಕೊನೆಯ ಮೊಳೆ ಹೊಡೆಯಲಿದೆ. ಕನಿಷ್ಠ 10 ದಿನಗಳವರೆಗೆ ಅಧಿವೇಶನ ಕರೆಯಬೇಕು. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಮುಖ್ಯಮಂತ್ರಿ ಹಾಗೂ ಸಭಾಧ್ಯಕ್ಷರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಎಲ್ಲ ವಿಷಯಗಳ ಅಧ್ಯಯನ ಮಾಡಿ, ಚರ್ಚಿಸಲು ನಾವು ಸಿದ್ಧ. ಉತ್ತರ ಕೊಡಲು ಸಿದ್ಧವಿಲ್ಲದ ರಾಜ್ಯ ಸರ್ಕಾರ, ಅಧಿವೇಶನವನ್ನು ಮೂರು ದಿನಕ್ಕೆ ಮುಕ್ತಾಯಗೊಳಿಸಿ ಓಡಿ ಹೋಗುತ್ತಿದೆ ಎಂದರ್ಥ ಎಂದು ವ್ಯಂಗ್ಯವಾಡಿದರು.
ಪ್ರಜಾಸೇವೆ ಮಾಡುತ್ತಿರುವುದ ಒಳ್ಳೆಯದು. ಆದರೆ, ಅಧಿಕಾರಿಗಳ ಕರ್ತವ್ಯ ನಿಷ್ಠೆ, ಸಮಸ್ಯೆ ಸಿಗುವ ಪರಿಹಾರ ತ್ವರಿತತೆ ಅಧರಿಸಿದೆ. 2-3 ತಿಂಗಳು ನೋಡಿ ಉತ್ತರ ಕೊಡಲಾಗುವುದು. ಯಾಕೆಂದರೆ, 3 ವರ್ಷದಿಂದ ನಾವು ಶಂಖ ಹೊಡೆದರೂ ಯಾವುದೇ ಕೆಲಸ ಆಗುತ್ತಿಲ್ಲ. ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಾದ್ಯವಾಗಿಲ್ಲ. ಪ್ರಜಾಸೇವೆಗೂ ಕಾಲಾವಕಾಶ ಕೊಡುತ್ತೇವೆ ಎಂದರು.