ಹುಬ್ಬಳ್ಳಿಯ ವಾರ್ಡ್ ನಂ. 42ರ ಜಾವೂರ ಬಡಾವಣೆಯಲ್ಲಿ ಶಾಸಕ (mahesh tenginakai) ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಯಿತು.
ಹುಬ್ಬಳ್ಳಿ: ಇಲ್ಲಿಯ ವಾರ್ಡ್ ನಂ. 42ರ ಜಾವೂರ ಬಡಾವಣೆಯಲ್ಲಿ (mahesh tenginakai) ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ಸ್ವಚ್ಛತಾ ಅಭಿಯಾನ ನೆರವೇರಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ನನ್ನ ಕ್ಷೇತ್ರದಲ್ಲಿ ನಿರಂತರ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಇದಕ್ಕೆ ಸ್ಥಳೀಯರು ಹಾಗೂ ನಮ್ಮ ಸಂಘಟನೆಯ ಸಾಥ್ ಕಾರಣ. ಹುಬ್ಬಳ್ಳಿ ನಗರ ಚೆಂದವಾಗಿ ಕಾಣಲು ನಾವೆಲ್ಲರೂ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಬೇಕು. ನಮ್ಮ ಓಣಿ, ಬಡಾವಣೆ, ನಗರವನ್ನು ಸೌಂದರ್ಯಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಯುವ ಮೋರ್ಚಾ ಅಧ್ಯಕ್ಷ ಮುತ್ತು ಹೆಬ್ಬಳ್ಳಿ, ಪ್ರಮುಖರಾದ ರಾಮನಗೌಡ ಶಟ್ಟನಗೌಡರ, ಮಂಜುನಾಥ ಊಟವಾಲೆ, ಅಶೋಕ ವಾಲ್ಮೀಕಿ, ಪ್ರವೀಣ ಬೆಳಗಲಿ ಇತರರು ಭಾಗವಹಿಸಿದ್ದರು.