ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಶಿಕ್ಷಕ ಸಾಹಿತಿ ಮಹೇಶ ಪರಸಣ್ಣನವರ ಸೇವಾನಿವೃತ್ತಿ ಹಾಗೂ "ನೀ ನಕ್ಕಾಗ' ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. 
ಧಾರವಾಡ

ಮಹೇಶ ಪರಸಣ್ಣನವರ ಬದುಕು ಆದರ್ಶಮಯ

ಧಾರವಾಡ: ನಮ್ಮ ಜೀವನ ಸಾರ್ಥಕತೆ ಕಾಣಬೇಕಾದರೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಪರ ಚಿಂತನೆ ಹೊಂದಬೇಕು. ಮಹೇಶ ಪರಸಣ್ಣನವರ ತಮ್ಮ ಸರಳ ಜೀವನ ಉನ್ನತ ವಿಚಾರಧಾರೆಗಳಿಂದ ಆದರ್ಶಮಯ ಬದುಕು ನಡೆಸಿದವರು ಎಂದು ರಾಷ್ಟ್ರೀಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಗೆಳೆಯರ ಬಳಗದಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕ ಸಾಹಿತಿ ಮಹೇಶ ಪರಸಣ್ಣನವರ ಸೇವಾನಿವೃತ್ತಿ ಹಾಗೂ "ನೀ ನಕ್ಕಾಗ' ಕವನ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಟಿ. ಈಶ್ವರ ಮಾತನಾಡಿ, ವ್ಯಕ್ತಿಗೆ ವೃತ್ತಿ ಬದ್ಧತೆ ಜತೆಗೆ ಸಾಮಾಜಿಕ ಬದ್ಧತೆ ಅಗತ್ಯ. ಅಂಕ ಗಳಿಕೆ ಮುಖ್ಯ ಎಂದು ತಿಳಿದು ನೈತಿಕ ಮೌಲ್ಯಗಳ ಬೆಳವಣಿಗೆ ಕಡೆಗೆ ಗಮನ ಕಡಿಮೆಯಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
"ನೀ ನಕ್ಕಾಗ' ಕವನ ಸಂಕಲನ ಬಿಡುಗಡೆ ಮಾಡಿದ ಹಿರಿಯ ವಕೀಲ ಪ್ರಕಾಶ ಉಡಿಕೇರಿ, ನಿವೃತ್ತ ಮುಖ್ಯಾಧ್ಯಾಪಕ ಎಸ್​.ಬಿ. ಕೇಸರಿ ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಜಯಶ್ರೀ ಕಾರೇಕರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಖಜಾಂಚಿ ರಾಜಶೇಖರ ಹೊನ್ನಪ್ಪನವರ, ಗಳೆಯರ ಬಳಗದ ಸದಸ್ಯರಾದ ಭೀಮಣ್ಣ ಮಲ್ಲಿಗವಾಡ, ಡಾ. ಎಸ್​.ಟಿ. ಅರಸನಾಳ, ಈಶ್ವರ ಪಶುಪತಿಹಾಳ, ರಮೇಶ ಚಟ್ಟಲದೇರಿ, ಬಸವರಾಜ ಪಟ್ಟಣದ, ಎಸ್​.ಜಿ. ಕವಟೇಕರ, ಜಗದೀಶ ಕಿತ್ತೂರ, ಐ.ಐ. ಕುದರಿ, ಶಿವಪ್ರಕಾಶ ಬೊಂಗಾಳೆ, ಇತರರಿದ್ದರು.
ಶಿಕ್ಷಕ ಲೇಖಕ ರಂಗನಾಥ ವಾಲ್ಮೀಕಿ ನಿರೂಪಿಸಿದರು. ಶಿಕ್ಷಕಿ ಪ್ರಮೀಳಾ ಜಕ್ಕಣ್ಣವರ ಪ್ರಾಥಿರ್ಸಿದರು. ಎಂ.ಬಿ. ಬಿರಾದಾರ ಸ್ವಾಗತಿಸಿದರು. ನಾಗರಾಜ ತಳವಾರ ವಂದಿಸಿದರು