ನವಲಗುಂದ ಪಟ್ಟಣದ ಲಿಂಗರಾಜ ವೃತ್ತದಲ್ಲಿ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾರ್ಲಾಪಣೆ ಮಾಡಿದರು. ಶಾಸಕ.ಎನ್.ಎಚ್. ಕೋನರಡ್ಡಿ, ವಿನೋದ ಅಸೂಟಿ, ವರ್ದಮಾನ ಗೌಡ ಹಿರೇಗೌಡರ ಇತರರಿದ್ದರು.
ನವಲಗುಂದ: ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿಯಿಂದ ಅನುಮೊದನೆ ಪಡೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಸಚಿವ ಡಾ.ಯತಿಂದ್ರ ಸಿದ್ದರಾಮಯ್ಯ ಹೇಳಿದರು.
ಭಾನುವಾರ ವಿಜಯಪುರಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಹಾಗೂ ಹೆಬಸೂರ ನವಲಗುಂದ ತಾಲೂಕಿನ ಕಾಲವಾಡ ಮತ್ತು ಯಮನೂರ ಗ್ರಾಮಗಳಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಂತರ 200 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಬೆಣ್ಣಿಹಳ್ಳದ ಪ್ರವಾಹ ತಡೆಯುವ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ ವೀಕ್ಷಿಸಿದರು. ಪಟ್ಟಣದ ಲಿಂಗರಾಜ ಸರ್ಕಲ್‌ನಲ್ಲಿರುವ ನವಲಗುಂದ ನರಗುಂದ ರೈತ ಬಂಡಾಯದ ರೈತ ವೀರಗಲ್ಲಿಗೆ ಹಾಗೂ ಮಹಾದಾನಿ ಲಿಂಗರಾಜ್ ದೇಸಾಯಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಅನಂತರ ನವಲಗುಂದ ಪೈಲ್ವಾನರ ಸಂಘದ ವತಿಯಿಂದ ಸಚಿವರನ್ನು ಸನ್ಮಾನಿಸಿ, ಕೋನರಡ್ಡಿ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಕೋನರಡ್ಡಿ ಅವರು ಹಿರಿಯನಾಯಕರಾಗಿದ್ದಾರೆ. ಅವರಿಗೆ ಸಚಿವಸ್ಥಾನ ಸಿಗುವ ಅವಕಾಶ ಬರಬಹುದು ಎಂದರು.
ನವಲಗುಂದ ಅಂಜುಮನ್ ಅಧ್ಯಕ್ಷ ಅಲ್ಲಾಸಾಬ ಕಲಕುಟ್ರಿ, ಜಮೀರ ಅಹ್ಮದಖಾನ ಹಾಗೂ ಕೋನರಡ್ಡಿ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಿಸೋದ ಅಸೂಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ದಮಾನ ಗೌಡಹಿರೇಗೌಡರ, ಮಂಜುನಾಥ ಮಾಯಣ್ಣವರ, ಶಿವಾನಂದ ಭೂಮಣ್ಣವರ, ವಿಕಾಸ ತದ್ದೆವಾಡಿ, ಮೋದಿನಸಾಬ ಶಿರೂರ, ಈಶ್ವರ ಕಾಳಪ್ಪನವರ, ಶಂಕ್ರಪ್ಪ ಮೂಗನೂರ, ಡಿ.ಕೆ. ಹಳ್ಳದ, ಉಸ್ಮಾನ ಬರ್ಚಿ, ದೇವಪ್ಪ ರೋಣದ, ಸಂತೋಷಗೌಡ ಪಾಟೀಲ, ಯಲ್ಲಪ್ಪ ದಾಡಿಬಾಯಿ, ಪ್ರಭಾಕರ ಮೋಹಿತೆ, ರವಿ ಬೆಂಡಿಗೇರಿ, ರಾಜಣ್ಣ ಹಳ್ಯಾಳ, ಹನಮಂತಪ್ಪ ಗಾಡದ, ಪ್ರಭುರಾಯನಗೌಡ್ರ ಇತರರಿದ್ದರು.