mads meet ಮ್ಯಾಡ್ಸ್ ಮೀಟ್ ಬಗ್ಗೆ ಮಾಹಿತಿ ನೀಡಿದ ಡಾ. ರಾಜೇಂದ್ರಪ್ರಸಾದ. ಡಾ. ಅಮಿತ್ ಅಂಗಡಿ, ಡಾ. ಅರುಣಾ ಬಟ್ಟೂರ, ಅಮಿತ ಮಹಾಜನ ಇದ್ದರು. 
ಧಾರವಾಡ

mads meet ಮ್ಯಾಡ್ಸ್ ಮೀಟ್ ಅಂದ್ರೆ ಸ್ಟಾರ್ಟಪ್ ಫೆಸ್ಟ್

ಪ್ರಮುಖ ಮುಖ್ಯಾಂಶಗಳು

  • ರಾಜ್ಯದ ವಿವಿಧೆಡೆಯ ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗಿ
  • ಹುಬ್ಬಳ್ಳಿ ಕೆಎಲ್ ಇ ಐಎಂಎಸ್ ಆರ್ ನಿಂದ ಆಯೋಜನೆ
ಹುಬ್ಬಳ್ಳಿ: mads meet ಇಲ್ಲಿಯ ವಿದ್ಯಾನಗರ ಕೆಎಲ್​ಇ ಸಂಸ್ಥೆಯ ಇನ್​ಸ್ಟಿಟ್ಯೂಟ್​ ಮ್ಯಾನೇಜಮೆಂಟ್​ ಸ್ಟಡಿಸ್​ ಆ್ಯಂಡ್ ರೀಸರ್ಚ್​ (ಐಎಂಎಸ್​ಆರ್​) ಎಂಬಿಎ ಕಾಲೇಜಿನ ವತಿಯಿಂದ ಮೇ 8 ಹಾಗೂ 9ರಂದು ರಾಜ್ಯ ಮಟ್ಟದ ಮ್ಯಾನೇಜ್​ಮೆಂಟ್​ ಉತ್ಸವ ಮ್ಯಾಡ್ಸ್​ ಮೀಟ್​ 2ಕೆ26 ಏರ್ಪಡಿಸಲಾಗಿದೆ ಎಂದು ಐಎಂಎಸ್​ಆರ್​ ನಿರ್ದೇಶಕ ಡಾ. ರಾಜೇಂದ್ರಪ್ರಸಾದ ಹನಗಂಡಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಶೀಲತೆ ಪ್ರೋತ್ಸಾಹಿಸುವ ಉದ್ದೇಶದಿಂದ 2014ರಿಂದ ಇಲ್ಲಿಯವರೆಗೆ ಎಂಟು ಬಾರಿ ಇಂತಹ ಕಾರ್ಯಕ್ರಮ ಆಯೋಜಿಸುತ್ತ ಬರಲಾಗಿದೆ. ಈ ಸಮ್ಮೇಳನದಿಂದ ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆಗಳಿಗೆ ಇಂಬು ನೀಡಲಾಗುವುದು. ನವೋದ್ಯಮಿಗಳಲ್ಲಿರುವ ಹೊಸ ಕೌಶಲ, ಆಲೋಚನೆಗಳನ್ನು ಗುರುತಿಸುವ ಕಾರ್ಯ ಇದರಿಂದ ಮಾಡಲಾಗುತ್ತದೆ ಎಂದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ಐದು ಸ್ಪರ್ಧೆಗಳನ್ನು ನಡೆಸಲಾಗುವುದು. ಕರ್ಟನ್​ ರೇಸರ್​, ರೈಸಿಂಗ್​ ಪಲಾಡಿನ್​, ಮ್ಯಾಚ್​ ವಿಜ್​, ನೋವಸ್​ ದಿ ಸೋಶಿಯಲ್​ ಆಂತ್ರಪ್ರಿನರ್​, ಸ್ಟಾರ್ಟಾಥಾನ್​ ನೋವಾಸ್​ ದಿ ಸೋಶಿಯಲ್​ ಆಂತ್ರಪ್ರಿನರ್​ ಸ್ಪರ್ಧೆಗಳು ನಡೆಯಲಿವೆ.
ಎಲ್ಲ ವಿಭಾಗಗಳಲ್ಲಿ ವಿಜೇತ ತಂಡಕ್ಕೆ 15 ಸಾವಿರ ರೂ. ಜನರಲ್​ ಚಾಂಪಿಯನ್​ ಪ್ರಶಸ್ತಿಯೊಂದಿಗೆ ಬಹುಮಾನ ನೀಡಲಾಗುವುದು. ಈಗಾಗಲೇ ರಾಜ್ಯದ 20ಕ್ಕೂ ಹೆಚ್ಚು ತಂಡಗಳು ನೋಂದಣಿ ಮಾಡಿಸಿದ್ದು, ಇನ್ನೂ ಕೆಲವು ಕಾಲೇಜುಗಳು ಬರುವ ನಿರೀಕ್ಷೆ ಇದೆ ಎಂದರು.
ಮೇ 9ರಂದು ಸಂಜೆ 6.30ಕ್ಕೆ ನಡೆಯುವ ಸಮಾರೋಪಕ್ಕೆ ನಟಿ ಅನುಪ್ರಭಾಕರ ಅತಿಥಿಗಳಾಗಿ ಭಾಗವಹಿಸುವರು. ಕೆಎಲ್​ ಇ ಐಎಂಎಸ್​ ಆರ್​ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್​.ಸಿ. ಮೆಟಗುಡ್ಡ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.