madhura estate ಸ್ವಚ್ಛತಾ ಆಂದೋಲನಾ ಪರಿವಾರವತಿಯಿಂದ ಹುಬ್ಬಳ್ಳಿಯ ಮಧುರಾ ಎಸ್ಟೇಟ್ ಪಾರ್ಕ್‌ನಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಯಿತು. 
ಧಾರವಾಡ

madhura estate ಉದ್ಯಾನ ಸ್ವಚ್ಛವಾಗಿಟ್ಟುಕೊಳ್ಳಲು ಸಲಹೆ

ಮರಿದೇವ ಹೂಗಾರ
ಹುಬ್ಬಳ್ಳಿ: ಸ್ವಚ್ಛತಾ ಅಭಿಯಾನ, madhura estate ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ನಿಮಿತ್ತ ಸ್ವಚ್ಛತಾ ಆಂದೋಲನಾ ಪರಿವಾರವತಿಯಿಂದ ಇಲ್ಲಿಯ ಕೇಶ್ವಾಪುರದ ಮಧುರಾ ಎಸ್ಟೇಟ್ ಪಾರ್ಕ್‌ನಲ್ಲಿ ಭಾನುವಾರ 33ನೇ ಸ್ವಚ್ಛತಾ ಅಭಿಯಾನ ನಡೆಯಿತು.
ಪಾಲಿಕೆ ಸದಸ್ಯೆ ಉಮಾ ಮುಕುಂದ ಮಾತನಾಡಿ, ಉದ್ಯಾನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ. ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಂತೆ ತಾಯಿ ಹೆಸರಿನಲ್ಲಿ ಒಂದು ಮರವನ್ನು ನೆಡಿ ಎಂದು ಸಲಹೆ ನೀಡಿದರು.
ವಿನೋದಕುಮಾರ ಪಟ್ವಾ ಮಾತನಾಡಿ, ಸ್ವಚ್ಛತೆ ಕೇವಲ ಅಭಿಯಾನಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬರ ದೈನಂದಿನ ಅಭ್ಯಾಸ ಹಾಗೂ ಸಾಮೂಹಿಕ ಜವಾಬ್ದಾರಿಯಾಗಬೇಕು ಎಂದರು.
ವಿ. ಮುಕುಂದ, ವೈ.ಬಿ. ಪಾಟೀಲ, ಪರಶುರಾಮ ಇಮಡಿ, ಶಿವಾನಂದ ನರಣ್ಣವರ, ಪ್ರಕಾಶ ಆನೆಗುಂದಿ, ಸೋಮನಾಥ ಮೆಹರವಾಡೆ, ಮನೋಜ ಹಬ್ಬು, ಪ್ರೀತಂ ಇರಕಲ್, ಪರಶುರಾಮ ವಾಲೀಕರ, ನಾಗರಾಜ, ಮೇಘಾ ಚಾಗಾಪುರಂ, ಅಶ್ವಿನಿ ಕಟ್ಟಿಮನಿ, ಕವಿತಾ ಮೊರಬದ, ಸುಧಾ ಆನೆಗುಂದಿ, ಪೂಜಾ ಕಟ್ಟಿಮನಿ ಇತರರಿದ್ದರು.