(love jihad) ಹಿಂದೂ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿರುವ ವ್ಯವಸ್ಥಿತ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹು-ಧಾ ಸಮಸ್ತ ಹಿಂದೂ ಸಮಾಜದಿಂದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಯಿತು. 
ಧಾರವಾಡ

(love jihad) ಲವ್‌ಜಿಹಾದ್ ಪ್ರಕರಣಕ್ಕೆ ಕಡಿವಾಣ ಹಾಕಲು ಮನವಿ

ಹುಬ್ಬಳ್ಳಿ: ಹು-ಧಾ ಅವಳಿ ನಗರದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ (love jihad) ಪ್ರಕರಣ ಮತ್ತು ಹಿಂದೂ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿರುವ ವ್ಯವಸ್ಥಿತ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹು-ಧಾ ಸಮಸ್ತ ಹಿಂದೂ ಸಮಾಜದಿಂದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ನಗರದಲ್ಲಿ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಕೆಎಲ್‌ಇ ಸಂಸ್ಥೆಯ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ಉದ್ಯಮಿ ಮಹಾದೇವ ಕರಮರಿ, ಹಂಪಿ ಕನ್ನಡ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಸುಭಾಷಸಿಂಗ್ ಜಮಾದಾರ ಮಾತನಾಡಿ, ಅವಳಿ ನಗರದಲ್ಲಿ ಹಿಂದೂ ಮಹಿಳೆಯರನ್ನು, ಯುವತಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಲವ್ ಜಿಹಾದ್ ನಡೆಸಿ ಕೆಟ್ಟ ಕೃತ್ಯಕ್ಕೆ ಅವರನ್ನು ಬಳಕೆ ಮಾಡಲಾಗುತ್ತಿದೆ. ವಿವಿಧ ಠಾಣೆಗಳಲಿ ಪ್ರಕರಣಗಳು ದಾಖಲಾಗಿರುವುದು ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.
ಜಿಮ್, ಹೇರ್ ಸಲೂನ್, ಏರೊಬಿಕ್, ಶಾಲೆ ಮತ್ತು ಕಾಲೇಜ್‌ಗಳನ್ನು ಗುರಿಯಾಗಿಸಿಕೊಂಡು ಮುಸ್ಲಿಂ ಯುವಕರು, ಹಿಂದೂ ಯುವತಿಯರನ್ನು ತಮ್ಮ ಜಾಲಕ್ಕೆ ಸಿಲುಕಿಕೊಳ್ಳುವಂತೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಮತ್ತು ಬರುವ ನಿಷೇಧಿಕ ಪದಾರ್ಥ ನೀಡಿ ಅವರ ಮೇಲೆ ಅತ್ಯಾಚಾರ, ಲೈಂಗಿಕ ಶೋಷಣೆ ಮಾಡಿ ಅವುಗಳನ್ನು ಚಿತ್ರಿಸಿಕೊಂಡು ಬ್ಲಾೃಕ್‌ಮೇಲ್ ತಂತ್ರ ರೂಪಿಸುತ್ತಿದ್ದಾರೆ. ಈ ಪ್ರಕರಣಗಳು ಹಿಂದೂ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಎಲ್ಲ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ಈ ಜಾಲದ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರಿಗೂ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ದಾಖಲಾದ ಪ್ರತಿಯೊಂದು ಪ್ರಕರಣವನ್ನು ಆಳವಾಗಿ ತನಿಖೆ ಮಾಡಬೇಕು. ಪ್ರತಿಯೊಂದು ಅಂಶ ಕಲೆ ಹಾಕುವಂತೆ ತಿಳಿಸಲಾಗಿದ್ದು, ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಪ್ರಮುಖರಾದ ವಿನಯ ಜವಳಿ, ನಿತೀನ ಠಕ್ಕರ, ಇಂದ್ರಜಿತ ಓಝಾ, ದೀಪಕ್ ಧನಿಗೊಂಡ, ರಾಮಸಿಂಗ ರಜಪೂತ, ಸುನೀಲ ದಳವಿ, ಜಸ್ಬಿರಸಿಂಗ, ಅನಂತರಾಜ ಭಟ, ಅಮೃತಲಾಲ ಪಟೇಲ, ಉಕಚಂದ ಬಾಫಣಾ, ಅರುಣ ಶಿಕ್ರೆ, ದಿನೇಶಲಾಲ ಸಂಘವಿ, ಚೆನ್ನು ಹೊಸಮನಿ, ವಿನಾಯಕ ಆಕಳವಾಡಿ, ವೀರಣ್ಣ ಕಲ್ಲೂರ, ಮಂಜುನಾಥ ಅದರಗುಂಚಿ, ಶಿವಾನಂದ ಸತ್ತಿಗೇರಿ, ವಿವಿಧ ಸಮಾಜದ ಮುಖಂಡರು, ಇತರರು ಉಪಸ್ಥಿತರಿದ್ದರು.