ಗವಿಓಣಿ ಮಸೀದಿ ಹತ್ತಿರದ ಮುಸ್ಲಿಂ ಯುವಕ (love jihad)ಮುಫೀಜ್ ಮಿಯಾನವರ  
ಧಾರವಾಡ

(love jihad) ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಬಯಲು

ಹುಬ್ಬಳ್ಳಿ: ಸಮೀರ್ ಮುಲ್ಲಾ ಲವ್ ಜಿಹಾದ್ ಪ್ರಕರಣ ಬಯಲಿಗೆ ಬೀಳುತ್ತಿದ್ದಂತೆಯೇ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ (love jihad) ಪ್ರಕರಣ ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕ ಯುವತಿಗೆ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದರ ಕುರಿತು ವೈದ್ಯಕೀಯ ವರದಿಗಳು ದೃಢಪಡಿಸಿವೆ.
ಇಲ್ಲಿಯ ಕುಸುಗಲ್ ರಸ್ತೆಯ ಸುಭಾಷನಗರದ ಯುವತಿಯನ್ನು ಕಮರಿಪೇಟೆಯ ಗವಿಓಣಿ ಮಸೀದಿ ಹತ್ತಿರದ ಮುಸ್ಲಿಂ ಯುವಕ ಮುಫೀಜ್ ಮಿಯಾನವರ ಪರಿಚಯಿಸಿಕೊಂಡಿದ್ದಾನೆ.
ಕಲಾವಿಭಾಗದಲ್ಲಿ ಓದುತ್ತಿದ್ದ ಯುವತಿಯನ್ನು ಐದು ವರ್ಷದ ಹಿಂದೆ ಇವೆಂಟ್‌ಒಂದರಲ್ಲಿ ಮುಫೀಜ್ ಪರಿಚಯ ಮಾಡಿಕೊಂಡಿದ್ದ. ಪೋನ್‌ನಲ್ಲಿ ಮಾತನಾಡುವುದು, ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡುತ್ತ ಹತ್ತಿರವಾಗಿದ್ದ. ಜತೆಗೆ ಓಡಾಡುತ್ತಿದ್ದ ವೇಳೆ ಗದಗ ರಸ್ತೆಯ ಸೇತುವೆ ಬಳಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶದಿಂದ ಮೈಕೈ ಮುಟ್ಟಿ, ಮುತ್ತಿ ಕೊಟ್ಟಿದ್ದ. ಇದರ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದ. ಯರಿಗಾದರೂ ಹೇಳಿದರೆ ನಿನ್ನನ್ನು ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ, ನಾನು ಕರೆದಾಗ ಬರಬೇಕು ಎಂದು ಧಮಕಿ ಹಾಕಿದ್ದ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾಳೆ.
ಆಗಸ್ಟ್ 2025ರಲ್ಲಿ ಅಲ್‌ಹಾಜ್ ಹೋಟೆಲ್ ಮಾಲೀಕರೊಂದಿಗೆ ಸೇರಿ ನನಗೆ ಬ್ಲಾೃಕ್‌ಮೇಲ್ ಮಾಡಿ ರಿಜಿಸ್ಟರ್ ಮ್ಯಾರೇಜ್‌ಗೆ ಒತ್ತಾಯಿಸಿದರು. ಧಾರವಾಡ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಕೊಡಿಸಿದ್ದರು. ಮದುವೆ ನೋಂದಣಿ ದಿನ ನಾವು ಹೋಗಲಿಲ್ಲ. ಆದರೆ, ಅವನು ಹೆದರಿಸಿದ್ದರಿಂದ ಕರೆದಾಗಲೆಲ್ಲ ಹೋಗುತ್ತಿದ್ದೆ. 10-15 ಬಾರಿ ನಮ್ಮ ಮನೆಗೆ ಬಂದಿದ್ದ. 2025 ನವೆಂಬರ್‌ನಲ್ಲಿ ನಮ್ಮ ಮನೆಯಲ್ಲಿ ಅತ್ಯಾಚಾರ ಮಾಡಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ನಿಮ್ಮ ತಂದೆ-ತಾಯಿಯನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಕೇಶ್ವಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.