ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ (love jihad) ಕೇಸ್
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ (love jihad) ಕೇಸ್ ಹೊರಬಿದ್ದಿದೆ.
ಇಲ್ಲಿಯ ಸಾಗರ ಕಾಲನಿಯ ಮನೆಯೊಂದರಲ್ಲಿ ಹಿಂದೂ ಯುವತಿಯನ್ನು ಕರೆದೊಯ್ದಿದ್ದ ಮುಸ್ಲಿಂ ಯುವಕನನ್ನು ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮಂಗಳವಾರ ವಶಕ್ಕೆ ಪಡೆದು ಅಶೋಕ ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗೋಕುಲ ರೋಡ್‌ನ ಶೋರೂಂವೊಂದರಲ್ಲಿ ಮೆಕಾನಿಕ್ ಕೆಲಸ ಮಾಡುತ್ತಿದ್ದ ಸಾಜಿದ್ ಉಣಕಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಕಳೆದ 5 ವರ್ಷದಿಂದ ಈ ಯುವಕ ಯುವತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಇದರ ಮಾಹಿತಿ ಅರಿತಿದ್ದ ಕಾರ್ಯಕರ್ತರು, ಮಂಗಳವಾರ ಮನೆಯೊಳಗಿದ್ದ ಯುವಕ-ಯುವತಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಯುವತಿಯ ತಂದೆ-ತಾಯಿಯನ್ನು ಕರೆಯಿಸಿ ವಿಚಾರಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯುವಕನ ಹಿನ್ನೆಲೆಯನ್ನು ಪೊಲೀಸರು ಕಲೆ ಹಾಕುತ್ತಿದ್ದು, ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.
ಬಜರಂಗದಳದ ರಾಜ್ಯ ಸಹ ಸಂಚಾಲಕ ಶಿವಾನಂದ ಸತ್ತಿಗೇರಿ ಸುದ್ದಿಗಾರರೊಂದಿಗೆ ಮಾತನಾಡಿ, ಪದೇ ಪದೆ ಹಿಂದೂ ಯುವತಿಯರೇ ಟಾರ್ಗೆಟ್ ಆಗುತ್ತಿದ್ದಾರೆ. ಮುಸ್ಲಿಂ ಯುವಕರು ಪ್ರತಿಷ್ಠಿತ ಮನೆತನದ ಹೆಣ್ಣುಮಕ್ಕಳ ಬ್ರೇನ್ ವಾಶ್ ಮಾಡುತ್ತಿದ್ದಾರೆ. ಈ ಮುಸ್ಲಿಂ ಯುವಕ ಕೂಡ ಹಿಂದೂ ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿ ನಿರಂತ ದೌರ್ಜನ್ಯ ಎಸಗಿದ್ದಾನೆ. ಯುವತಿ ಕುಟುಂಬದವರು ಮರ್ಯಾದೆಗೆ ಹೆದರಿ ದೂರ ಸರಿಯುವ ಮುನ್ಸೂಚನೆ ಅರಿತು ಈ ಕೃತ್ಯ ಎಸಗುತ್ತಿದ್ದಾರೆ. ಪೊಲೀಸರು ಈ ಯುವಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಪ್ರಶಾಂತ ನರಗುಂದ, ಚೇತನರಾವ್, ಶಂಕರ ಕಮತರ ಸೇರಿದಂತೆ ಅನೇಕ ಕಾರ್ಯಕರ್ತರು ಸ್ಥಳದಲ್ಲಿದ್ದರು.