ಭಗವಾನ್ ಶ್ರೀ ಮಹಾವೀರ ಜಯಂತಿ
ಧಾರವಾಡ: ಪ್ರಸ್ತುತ ಯುದ್ಧಗಳ ಸಂದರ್ಭದಲ್ಲೂ ಭಾರತದ ಜನತೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿದೆ. ಅದಕ್ಕೆ ಭಗವಾನ್ ಶ್ರೀ ಮಹಾವೀರರ ಅಹಿಂಸಾ ತತ್ವ, ಬುದ್ಧ- ಬಸವಾದಿಗಳ ಉಪದೇಶಗಳೇ ಕಾರಣ. ಮಹಾವೀರರು ಮಾನವ ಕುಲಕ್ಕೆ ಶಾಂತಿ, ಅಹಿಂಸೆ ಮತ್ತು ಸತ್ಯದ ಮಾರ್ಗ ತೋರಿಸಿದರು. ಅವರ ಉಪದೇಶಗಳು ಸಾರ್ವಕಾಲಿಕ ಎಂದು ಜೆಎಸ್ಎಸ್ ಕಾರ್ಯದಶಿರ್ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದ ಜೆಎಸ್ಎಸ್ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧರ್ಮದ ಆಚಾರ- ವಿಚಾರಗಳು ಜಾತಿ- ಮತಕ್ಕೆ ಸೀಮಿತವಾಗದ ಮಾನವ ಕುಲದ ಒಳಿತಿಗೆ ಮಾರ್ಗದರ್ಶಕವಾಗಿವೆ. ಅವು ಕೋಪಕ್ಕಿಂತ ಮೆ, ದ್ವೇಷಕ್ಕಿಂತ ಪ್ರೀತಿ, ಹಿಂಸೆಗೆ ಬದಲು ದಯೆ ತೋರುವುದು, ಅಸೂಯೆಯನ್ನು ಬಿಡುವುದು, ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತವೆ ಎಂದರು.
ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಡಾ. ಆರ್.ವಿ. ಚಿಟಗುಪ್ಪಿ ಮಾತನಾಡಿ, ಜೆನ ಧರ್ಮದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ವ್ಯಕ್ತಿತ್ವನ್ನು ರೂಪಿಸಿಕೊಳ್ಳಬಹುದು. ಯಾವುದೇ ಕಾರ್ಯ ಕೆಗೊಳ್ಳುವ ಮುನ್ನ ರ್ಪೂಣ ಪ್ರಮಾಣದ ಜ್ಞಾನ ಹೊಂದಬೇಕು ಎಂದರು.
ಇದೇ ಸಂದರ್ಭದಲ್ಲಿ ಜೆ.ಎಸ್.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಶೀ ಮಹಾವೀರ ಉಪಾದ್ಯೆ ನಿರೂಪಿಸಿ, ವಂದಿಸಿದರು. ಎಂ.ಸಿ.ಎ ನಿರ್ದೇಶಕಾರಾದ ಡಾ. ಸೂರಜ್ ಜೆನ್, ಶೀಮತಿ ಜ್ಯೋತಿ ಅಕ್ಕಿ, ಶೀಮತಿ ಶತಿ ಶೆಟ್ಟಿ, ಡಾ. ರೋನಿಲ್ ಮನೋಹರ್, ಡಾ. ಜಿನ್ನಪ್ಪ ಕುಂದಗೋಳ, ಡಾ. ಮಂಜುನಾಥ ಪೂಜಾರ, ಶೀ ಭಲಭೀಮ ಹಾವನೂರ, ಶೀಮತಿ ಶಿಲ್ಪಾ ನಾಯಕ್, ಶೀಮತಿ ರಜನಿ ತಾಳಿಕೋಟಿ ಹಾಗೂ ಶಿಕ&ಶಿಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.