ಧಾರವಾಡ: ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ಅಭಿಯಂತರ ಸುರೇಂದ್ರಕುಮಾರ್ ಕಳಸ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಇಲ್ಲಿನ ಕಲ್ಯಾಣನಗರದಲ್ಲಿರುವ ವಾಸದ ಮನೆ, ಬಾಡಿಗೆ ಕೊಟ್ಟಿರುವ ಮನೆ, ಪಿ.ಜಿ. ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ದೂರಿನ ಮೇರೆಗೆ ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ. ನಗರದಲ್ಲಿ ಸುರೇಂದ್ರಕುಮಾರ್ ಮಾಲೀಕತ್ವದ ಅಪಾರ್ಟ್ಮೆಂಟ್ನಲ್ಲಿ ್ಯ್ಲಾಟ್, ಪೇಯಿಂಗ್ ಗೆಸ್ಟ್ ಕಟ್ಟಡ ಮತ್ತು 1 ಕಾರು ಪತ್ತೆಯಾಗಿದೆ. ಕೊಪ್ಪಳ ಮತ್ತು ರಾಯಚೂರಿನಲ್ಲಿ 8 ನಿವೇಶನಗಳು, ರಾಯಚೂರಿನಲ್ಲಿ 7 ಎಕರೆ ಜಮೀನಿನ ದಾಖಲೆಗಳು ಪತ್ತೆಯಾಗಿವೆ. ಸುರೇಂದ್ರಕುಮಾರ್ ನಗರದಲ್ಲಿ ್ಯ್ಲಾಟ್ ಹೊಂದಿದ್ದು, ಅದರಲ್ಲಿ ವಾಸಿಸದೆ ಬಾಡಿಗೆ ಮನೆಯಲ್ಲಿದ್ದರು. ದಾಳಿಯಲ್ಲಿ ಪತ್ತೆಯಾದ ಸ್ಥಿರ ಮತ್ತು ಚರಾಸ್ತಿಗಳ ದಾಖಲಾತಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.