ಡಾ. ಸುಭಾಸಚಂದ್ರ ನಾಟಿಕರ್ ಅವರ ಮನೆ ಮನೆ ಮೇಲೆ ಲೋಕಾಯುಕ್ತ (Lokayukta) ದಾಳಿ
ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸುಭಾಸಚಂದ್ರ ನಾಟಿಕರ್ ಅವರ ಮನೆ ಮೇಲೆ ಲೋಕಾಯುಕ್ತ (Lokayukta) ಅಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿದೆ.
ಪ್ರೊ. ನಾಟಿಕರ್ ಅವರ ಯಾಲಕ್ಕಿ ಶೆಟ್ಟರ ಕಾಲನಿಯ ಮನೆ ಮತ್ತು ಕವಿವಿ ಸಮಾಜಶಾಸ್ತ್ರ ವಿಭಾಗದಲ್ಲಿರುವ ಕಚೇರಿ, ಅಂಬೇಡ್ಕರ್ ಸ್ಟಡಿಸ್ನ ಕಚೇರಿ ಮತ್ತು ಕೊಪ್ಪಳದ ತಾಳಿಕೋಟೆಯ ಮನೆಯ ಮೇಲೆ ಲೋಕಾಯುಕ್ತರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ಮಾಡಿ, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸಲಾಯಿತು.
ಪ್ರೊ. ನಾಟಿಕರ್ ಕರ್ನಾಟಕ ವಿವಿ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಕರ್ನಾಟಕ ವಿವಿ ಅಂಬೇಡ್ಕರ್ ಸ್ಟಡಿಸ್ ಸಂಯೋಜಕರಾಗಿದ್ದಾರೆ. ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಹುದ್ದೆಯ ಆಕಾಂಯಾಗಿದ್ದು, ಸದ್ಯದಲ್ಲೇ ನಿಯುಕ್ತಿಗೊಳ್ಳುವ ಸಾಧ್ಯತೆ ಇತ್ತು.
* ಸಹೋದರನ ಮಗನ ಮದುವೆ ಇತ್ತು:
ಪ್ರೊ. ನಾಟಿಕರ್ ಅವರ ಸಹೋದರನ ಮಗನ ಮದುವೆ ನಗರದ ಐಷಾರಾಮಿ ಹೋಟೆಲ್ವೊಂದರಲ್ಲಿ ನಿಗದಿಯಾಗಿತ್ತು. ಹೀಗಾಗಿ ಅತಿಥಿಗಳು, ಸಂಬಂಧಿಕರು ಅವರ ಮನೆಗೆ ಬಂದಿದ್ದರು. ಇದೇವೇಳೆ ಲೋಕಾಯುಕ್ತ ದಾಳಿ ನಡೆದು, ಅತಿಥಿಗಳ ಕಾರುಗಳನ್ನೂ ಪರಿಶೀಲನೆ ಮಾಡಿ ಹೊರಬಿಟ್ಟರಿ. ಅತಿಥಿಗಳು ಮದುವೆಗೆ ಹೋದರೆ, ನಾಟಿಕರ್ ಅವರಮ್ಮಿ ಅಧಿಕಾರಿಗಳು ಮನೆಯಲ್ಲೇ ಉಳಿಸಿಕೊಂಡಿದ್ದರು.