lokabhiramaಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ‘ಲೋಕಾಭಿರಾಮ’ ಕಾರ್ಯಕ್ರಮದಲ್ಲಿ ಅರಿವಳಿಕೆ ತಜ್ಞೆ ಡಾ. ಅಶ್ವಿನಿ ಎಚ್.ಆರ್. ಮಾತನಾಡಿದರು.
ಹುಬ್ಬಳ್ಳಿ: ಆಂತರ್ಯ ಪ್ರತಿಷ್ಠಾನ ವತಿಯಿಂದ
ಇಲ್ಲಿಯ ವಿದ್ಯಾನಗರದ ಅಕ್ಷಯ ಕಾಲನಿಯ ಹೊನ್ನಪ್ಪ ತಾವರಗೇರಿ ರೋಟರಿ ಭವನದಲ್ಲಿ ‘ಲೋಕಾಭಿರಾಮ’ ಕಾರ್ಯಕ್ರಮ ನಿಮಿತ್ತ ‘ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ’ ಸಂಚಿಕೆಯ ಭಾಗವಾಗಿ ಭಾನುವಾರ ಉಪನ್ಯಾಸಗಳು ಮನಮುಟ್ಟು
ಅರಿವಳಿಕೆ ತಜ್ಞೆ ಡಾ. ಅಶ್ವಿನಿ ಎಚ್.ಆರ್. ಮಾತನಾಡಿ, ಡಿ.ವಿ. ಗುಂಡಪ್ಪನವರು ಜೆನ್‌ಜೀ ಕುರಿತೇ ಆಗ ತಿಳಿವಳಿಕೆಯ ಮಾತುಗಳನ್ನಾಡಿದ್ದಾರೆ. ಮಾರ್ಗದರ್ಶನವನ್ನೂ ನೀಡಿದ್ದಾರೆ. ನಾವು ಹೇಗಿದ್ದೇವೋ ಹಾಗೆಯೇ ಬದುಕನ್ನು ಸ್ವೀಕರಿಸುತ್ತಿರಬೇಕು. ನಮ್ಮ ಒತ್ತಡವನ್ನು ಮಕ್ಕಳ ಮೇಲೆ ಹೇರದೆ, ಭವಿಷ್ಯದ ಕುತೂಹಲಿಗಳಾದ ಮಕ್ಕಳನ್ನು ತಮ್ಮಿಷ್ಟಕ್ಕೆ ಬಿಟ್ಟುಬಿಡಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಸತೀಶ ಮುರೂರು, ಡಾ. ಗೋವಿಂದ ಹೆಗಡೆ ಮಾತನಾಡಿ, ವಿಧಿಯಾಟಕ್ಕೆ ತಲೆಬಾಗಲೇಬೇಕು. ವೈಜ್ಞಾನಿಕ ಅಥವಾ ತಾಂತ್ರಿಕ ತಳಹದಿ ಮೇಲೆ ನೋಡಿದರೂ ದೇವರು ಸರ್ವವ್ಯಾಪಿ. ಮಂಕುತಿಮ್ಮನ ಕಗ್ಗದಲ್ಲಿ ದೈವತ್ವ ಕುರಿತೇ ನಿರರ್ಗಳ ಸಾಲುಗಳಿವೆ ಎಂದು ವಿವರಿಸಿದರು.
ಹೆಸ್ಕಾಂ ಉದ್ಯೋಗಿ ರವಿ ಅಂಬೋಜಿ, ಶಿಕ್ಷಕಿ ನಿರ್ಮಲಾ ಶೆಟ್ಟರ್ ಮಾತನಾಡಿ, ಸಮಾಜದ ಸ್ವಾಸ್ಥೃ ಕಗ್ಗದಲ್ಲಿದೆ. ನಾವು ಸುಧಾರಿಸುವುದಲ್ಲದೆ, ಸಮಾಜವನ್ನೂ ಸುಧಾರಿಸುವ ಶಕ್ತಿ, ತಾಕತ್ತು ಸಾಲುಗಳಲ್ಲಿದೆ. ಯುದ್ಧದ ಕುರಿತು ಬೇಸರದ ನುಡಿಗಳು ಕಗ್ಗದಲ್ಲಿವೆ. ಧಾವಂತದ ಬದುಕು ಸಾಗಿಸುತ್ತಿದ್ದೇವೆ. ಮನುಷ್ಯತ್ವ ರೂಪಿತ ಜೀವನ ಸಾಗಿಸುವಂತಾಗಬೇಕು ಎಂದರು.
ಶಹರ ತಹಸೀಲ್ದಾರ್ ಮಹೇಶ ಗಸ್ತೆ, ಡಾ. ರವೀಂದ್ರ ಗದಗ, ಡಾ. ಶಂಕರ ಬಿಜಾಪುರ, ಸಾಹಿತಿ ಪ್ರಕಾಶ ಕಡಮೆ ಸೇರಿ ಇತರರು ಮೆಚ್ಚುಗೆಯ ನುಡಿಗಳನ್ನಾಡಿದರು.
ಉದಯೋನ್ಮುಖ ಗಾಯಕರಿಂದ ಕನ್ನಡ ಗೀತ ಗಾಯನ ಹಾಗೂ ಜ್ಯಾಮಿಂಗ್ ಜರುಗಿತು.
ಕೆಎಂಸಿಆರ್‌ಐ ಪ್ರಾಚಾರ್ಯ ಡಾ. ಸೂರ್ಯಕಾಂತ ಕಲ್ಲೂರಾಯ, ಮಾಜಿ ಸಿಂಡಿಕೇಟ್ ಸದಸ್ಯ ಪ್ರಶಾಂತ ಆಡೂರ, ಡಾ. ರಾಜಶೇಖರ ದ್ಯಾಬೇರಿ, ಮನೋವೈದ್ಯರಾದ ಡಾ. ಶಿವಾನಂದ ಹಿರೇಮಠ, ಡಾ. ಚೈತ್ರಾ ಹಿರೇಮಠ ಇತರರು ಇದ್ದರು.