ರಫೀಕ್ ತಹಸೀಲ್ದಾರ್, ಶಿವಯೋಗಿ ಲೋಹಾರ
ಧಾರವಾಡ: ಪ್ರತ್ಯೇಕ ಪ್ರಕರಣಗಳಲ್ಲಿ ಅಮಾನತಾಗಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು ಶಿಕ್ಷೆ ರದ್ದಾಗಿದ್ದು, ಅದಲಿ ಬದಲಿ ಠಾಣೆಗೆ ನಿಯುಕ್ತಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ತಾಲೂಕಿನ ಗರಗ ವೃತ್ತ ನಿರೀಕ್ಷಕರಾಗಿದ್ದ ಶಿವಯೋಗಿ ಲೋಹಾರ ಅವರನ್ನು ನಗರದ ವಿದ್ಯಾಗಿರಿ ಠಾಣೆ ಇನ್ಸ್ಪೆಕ್ಟರ್ ಹುದ್ದೆಗೆ ನಿಯೋಜಿಸಲಾಗಿದೆ. ಅದೇರೀತಿ ವಿದ್ಯಾಗಿರಿ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ರಫೀಕ್ ತಹಸೀಲ್ದಾರ್ ಅವರನ್ನು ತಾಲೂಕಿನ ಗರಗ ವೃತ್ತ ನಿರೀಕ್ಷಕ ಹುದ್ದೆಗೆ ನಿಯೋಜಿಸಲಾಗಿದೆ.
ಕೆಲ ತಿಂಗಳ ಹಿಂದೆ ಗರಗ ಗ್ರಾಮದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯನ್ನು ಪುಸಲಾಯಿಸಿದ್ದ ಅನ್ಯ ಕೋಮಿನ ಯುವಕ ಲವ್ ಜಿಹಾದ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಆದಾಗ್ಯೂ ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸದೆ ನಿರ್ಲಕ್ಷ$್ಯ ವಹಿಸಿದ್ದಾರೆ ಎಂದು ಗರಗ ವೃತ್ತ ನಿರೀಕ್ಷಕ ಶಿವಯೋಗಿ ಲೋಹಾರ ವಿರುದ್ಧ ಹಿಂದುಪರ ಸಂಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಹಾರ ಅವರನ್ನು ಅಮಾನತು ಮಾಡಿದ್ದರು.
ಮತ್ತೊಂದೆಡೆ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಪತ್ತೆ ಮತ್ತು ಜಾಗೃತಿ ಅಭಿಯಾನ ನಡೆಸಲಾಗಿತ್ತು. ನಗರದ ಪದವಿ ಕಾಲೇಜೊಂದರ ಬಿ.ಎಸ್ಸಿ ವಿದ್ಯಾಥಿರ್ಯೊಬ್ಬನನ್ನು ವಿದ್ಯಾಗಿರಿ ಠಾಣೆ ಪೊಲೀಸರು ತಪಾಸಣೆಗೊಳಪಡಿಸಿದ್ದರು. ಆತನ ವರದಿ ನೆಗಟಿವ್ ಬಂದಿದ್ದರೂ ಪೊಲೀಸರು 2,000 ರೂ. ಕೇಳಿದ್ದಾರೆ. ಇದರಿಂದ ನೊಂದ ವಿದ್ಯಾಥಿರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ದಾಖಲಾಗಿತ್ತು. ಈ ಸಂಬಂಧ ವಿದ್ಯಾಗಿರಿ ಠಾಣೆ ಇನ್ಸ್ಪೆಕ್ಟರ್ ರಫೀಕ್ ತಹಸೀಲ್ದಾರ್ ಸೇರಿ ಮೂವರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿತ್ತು.