ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಪಂ ಆವರಣದಲ್ಲಿ ರಾಜ್ಯ ಸರ್ಕಾರಿ ಮಹಿಳೆಯರ ನೌಕರರ ಸಂಘದಿಂದ ದಿ.ಸಾಲುಮರದ ತಿಮ್ಮಕ್ಕನವರ ಹೆಸರಿನಲ್ಲಿ growing plants ಸಸಿ ನೆಟ್ಟು ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಲಘಟಗಿ: ತಾಲೂಕಿನ ಹಿರೇಹೊನ್ನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ರಾಜ್ಯ ಸರ್ಕಾರಿ ಮಹಿಳೆಯರ ನೌಕರರ ಸಂಘದಿಂದ ದಿ. ಸಾಲುಮರದ ತಿಮ್ಮಕ್ಕನವರ ಹೆಸರಿನಲ್ಲಿ ಸಸಿ ನೆಟ್ಟು ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, ಸಾಲುಮರದ ತಿಮ್ಮಕ್ಕನವರು ಇಡೀ ಜೀವಸಂಕುಲದ ಉದ್ಧಾರಕ್ಕಾಗಿ ಹಸಿರಿನ ಹೆಮ್ಮೆಯಾಗಿ, ಜೀವ ಜಗತ್ತಿಗೆ ತಾಯಿಯಾಗಿ, ದೇಶವೇ ಗೌರವ ಸಲ್ಲಿಸುವಂತಹ ತ್ಯಾಗಮಯಿಯಾದವರು. ಅಂತಹವರನ್ನು ಮಾದರಿಯಾಗಿಟ್ಟುಕೊಂಡು ನಾವು ಗಿಡಗಳ ಬೆಳೆಸುವ growing plants ಪ್ರಯತ್ನ ಮಾಡಬೇಕು ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುವರ್ಣಾ ಚಿಟೀನ್ ಮಾತನಾಡಿ, ಸತ್ಕರ್ಮವೇ ಶಾಶ್ವತ, ಮಾನವ ಸೇವೆಯೇ ಮಹಾ ಧರ್ಮ. ಸಾಲುಮರದ ತಿಮ್ಮಕ್ಕನವರ ಹೆಸರಿನಿಂದ ಧಾರವಾಡದ ಪರಿಸರ ಪ್ರೇಮ ತಂಡದ ಸಹಯೋಗದಲ್ಲಿ ನಾವು ಬಣ್ಣದರ್ಪಣದ ಜತೆಗೆ ಸಸಿ ನೆಡುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ ಎಂದರು.
ಪರಿಸರ ಪ್ರೇಮ ತಂಡದ ಜಿಲ್ಲಾ ಸಂಚಾಲಕ ವೀರೇಶ ಹಿರೇಮಠ, ಗ್ರಾಪಂ ಅಧ್ಯಕ್ಷ ವಿನಾಯಕ ದನಿಗೊಂಡ, ಎಲ್.ಐ. ಲಕ್ಕಮ್ಮನವರ, ಬಸವರಾಜ ಬಡಿಗೇರ, ಯಲ್ಲಪ್ಪ ಸಾಲುಂಕೆ, ಪಿಡಿಒ ವಿಜಯಲಕ್ಷ್ಮೀ ಬರದೂರ, ಬಸವರಾಜ ಬಾಗಲ, ಪದ್ಮಾವತಿ ಕೊಚ್ಚರಗಿ, ಕಸ್ತೂರಿ ಹಪ್ಪಳದ, ಅನ್ನಪೂರ್ಣಾ ಹಿರೇಮಠ, ಗ್ರಾಮಸ್ಥರು ಇದ್ದರು.