ಡಾ. ಈಶ್ವರ್ ಉಳ್ಳಾಗಡ್ಡಿ ಮಾತನಾಡಿದರು. 
ಧಾರವಾಡ

ಎಸ್​ಎಸ್​ಎಲ್​ಸಿ ಫಲಿತಾಂಶ ಶೇ. 100ರ ಗುರಿ ಇರಲಿ

ಮಂಜುನಾಥ ಅಂಗಡಿ
ಧಾರವಾಡ: ಪ್ರತಿ ಮಗು "ಮೂಲಭೂತ ಭಾಷಾ ಮತ್ತು ಸಂಖ್ಯಾಜ್ಞಾನ'ವನ್ನು (ಎ್​ಎಲ್​ಎನ್​) ಶೇ. 100ರಷ್ಟು ಗಳಿಸಲು ಜೂನ್​ನಿಂದ ಆಗಸ್ಟ್​ವರೆಗೆ ಕ್ರಿಯಾಯೋಜನೆ ರೂಪಿಸಬೇಕು. ಸೂಕ್ತ ಮೇಲ್ವಿಚಾರಣೆ ನಡೆಸಿ ಅನುಪಾಲನೆ ಮಾಡಬೇಕು. ಪ್ರತಿ ಶಾಲೆಗೆ ನೋಡಲ್​ ಅಧಿಕಾರಿಗಳನ್ನು ನೇಮಿಸಿ ಅವರು ವಾರದಲ್ಲಿ 2 ದಿನ ಕಡ್ಡಾಯವಾಗಿ ಸಂದರ್ಶನ ನೀಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.
ನಗರದ ಜೆಎಸ್​ಎಸ್​ ಸಭಾಂಗಣದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಪ್ರಗತಿಪಥ ಯಶಸ್ವಿ ಅನುಷ್ಠಾನ ಕುರಿತ ಕಲಿತಾ ಉತ್ಕರ್ಷ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್​ಎಸ್​ಎಲ್​ಸಿ ಫಲಿತಾಂಶ ಸುಧಾರಣೆಯನ್ನು ಸವಾಲಾಗಿ ಸ್ವೀಕರಿಸಿ, ಈ ವರ್ಷ ಎಲ್ಲ ಶಾಲೆಗಳ ಲಿತಾಂಶ ಶೇ. 100 ಆಗಲು ಶಿಕ್ಷಕರು ಪಣ ತೊಡಬೇಕು ಎಂದರು.
1ರಿಂದ 3ನೇ ತರಗತಿಗೆ 30 ದಿನಗಳ ಸೇತುಬಂಧ ಕಾರ್ಯಕ್ರಮ ಮತ್ತು 4ರಿಂದ 10ನೇ ತರಗತಿ ಮಕ್ಕಳಿಗೆ 15 ದಿನಗಳ ಸೇತುಬಂಧ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. 4ರಿಂದ 10ನೇ ತರಗತಿಯವರಿಗೆ ಪ್ರತಿ ಪಾಠದ ಭೋಧನೆಯ ನಂತರ ಎಲ್​ಬಿಎ (ಪಾಠ ಆಧಾರಿತ ಮೌಲ್ಯಮಾಪನ) ಪ್ರಶ್ನೆಕೋಠಿ ಬಳಸಿ ಮೌಲ್ಯಮಾಪನ ಮಾಡಬೇಕು. ಧಾರವಾಡ ಐಐಟಿಯಿಂದ ಅಭಿವೃದ್ಧಿಯಾಗುತ್ತಿರುವ ಸ್ವಯಂ ಕಲಿಕಾ ಎಐ ಆಧಾರಿತ ಆ್ಯಪ್​ ಮೂಲಕ ಮೌಲ್ಯಮಾಪನ ನಡೆಸಬೇಕು. ವಿದ್ಯಾಥಿರ್ಗಳ ದೈನಂದಿನ ಹಾಜರಾತಿಯನ್ನು "ನಿರಂತರ' ಕಾರ್ಯಕ್ರಮ ಮೂಲಕ ವಿದ್ಯಾಥಿರ್ಗಳ ಹಾಜರಾತಿ ಮತ್ತು ಕೆಎಎಎಂಎಸ್​ ಮೂಲಕ ಶಿಕ್ಷಕರ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು ಎಂದು ಸೂಚಿಸಿದರು.
ಪ್ರತಿ ಶಾಲೆಯಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳ ಪೂರ್ವಸಿದ್ಧತೆ, ದಾಖಲಾತಿ, ಹಾಜರಾತಿ, ಬೋಧನಾ ಕಲಿಕಾ ಪ್ರಗತಿ, ಪ್ರೋತ್ಸ್ಸಾಹದಾಯಕ ಅನುಷ್ಠಾನದ ಬಗ್ಗೆ ಪರಿಶೀಲನೆ ಮಾಡಬೇಕು. ಇದಕ್ಕಾಗಿ ಅನುಷ್ಠಾನಾಧಿಕಾರಿಗಳನ್ನು ಒಳಗೊಂಡ ತಂಡವು ಮಿಂಚಿನ ಸಂಚಾರದಡಿ ಶಾಲೆಗಳನ್ನು ಅನಿರೀಕ್ಷಿತವಾಗಿ ಸಂದಶಿರ್ಸಿ ಮಕ್ಕಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಬೇಕು ಎಂದರು.
ಜೂ. 1ರಂದು ಶಾಲಾ ಪ್ರಾರಂಭೋತ್ಸವಕ್ಕೆ ಶಾಲೆಗಳ ಸಂರ್ಪೂಣ ಸ್ವಚ್ಛತೆ ಕೈಗೊಳ್ಳಬೇಕು. ಅಂದು ಎಲ್ಲ ಮಕ್ಕಳು ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು. ಪೋಷಕ& ಶಿಕ್ಷಕ ಮಹಾಸಭೆ ಹಮ್ಮಿಕೊಂಡು ಜನಪ್ರತಿನಿಧಿಗಳನ್ನು ಆಹ್ವಾನಿಸಿ ಶಾಲಾ ಹಬ್ಬವನ್ನಾಗಿ ಆಚರಿಸಬೇಕು. ಸರ್ಕಾರಿ ಶಾಲೆಗಳು ಮತ್ತು ಅಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ವ್ಯಾಪಕ ಪ್ರಚಾರ ಮಾಡಿ ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಬೇಕು ಎಂದರು.
2025- 26ನೇ ಸಾಲಿನಲ್ಲಿ ಎಸ್​ಎಸ್​ಎಲ್​ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿದ ಉಸ್ತುವಾರಿ ಅಧಿಕಾರಿಗಳಿಗೆ ಅಪರ ಆಯುಕ್ತರು ಅಭಿನಂದನೆ ತಿಳಿಸಿದರು.
ಬೆಳಗಾವಿ ವಿಭಾಗದ ಸಹ ನಿರ್ದೇಶಕರು, ಉಪ ನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ), ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಧ್ಯಾಹ್ನ ಉಪಹಾರ ಯೋಜನೆಯ ಅಧಿಕಾರಿಗಳು, ಉಸ್ತುವಾರಿ ಅಧಿಕಾರಿಗಳು ಹಾಜರಾಗಿದ್ದರು.
ನಿರ್ದೇಶಕ ಈಶ್ವರ ನಾಯ್ಕ, ಸಹ ನಿರ್ದೇಶಕರಾದ ಮಂಗಳಾ ನಾಯ್ಕ, ಶ್ರೀಕಂಠೇಗೌಡ ಹಾಗೂ ವೃಷಭೇಂದ್ರಯ್ಯ ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಸಮಾಲೋಚಕ ಮಹೇಶ ಮಾಶ್ಯಾಳ, ಡಾ. ಗುರುರಾಜ ಪಾಟೀಲ ಉಪನ್ಯಾಸ ನೀಡಿದರು. ಉಪ ನಿರ್ದೇಕ (ಆಡಳಿತ) ಗಿರೀಶ ಪದಕಿ ಸ್ವಾಗತಿಸಿದರು. ಅಶೋಕ ಕುಂಬಾರ ವಂದಿಸಿದರು.