ಜಿಲ್ಲಾಧಿಕಾರಿ ಸ್ನೇಹಲ್ ಆರ್.
ಧಾರವಾಡ: ಜಿಲ್ಲೆಯಲ್ಲಿ ಸೆಪ್ಟೆಂಬರ್ 18ರವರೆಗೆ 450.3 ಮೀ.ಮೀ. ವಾಡಿಕೆ ಮಳೆಯಾಗಬೇಕಾಗಿತ್ತು. ವಾಸ್ತವವಾಗಿ 247.9 ಮೀ.ಮೀ ಮಳೆಯಾಗಿದ್ದು, ಶೇ.45ರಷ್ಟು ಮಳೆ ಕೊರತೆಯಾಗಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯರೂ ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಜಿಲ್ಲೆಯ 3 ತಾಲೂಕಿನ ಗ್ರಾಮೀಣ ಪ್ರದೇಶದ 17 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗಿದ್ದು, 19 ಖಾಸಗಿ ಕೊಳವೆಬಾವಿ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕುಗಳಲ್ಲಿ ಮಲಪ್ರಭ ಜಲಾಶಯದಿಂದ ಕಾಲುವೆಗಳ ಮೂಲಕ 55 ಕುಡಿಯುವ ನೀರಿನ ಕೆರೆಗಳನ್ನು ಆಗಸ್ಟ್ ತಿಂಗಳಿನಲ್ಲಿ ಭತಿರ್ ಮಾಡಿಕೊಳ್ಳಲಾಗಿದೆ. ನವೆಂಬರ್ ಅಂತ್ಯದವರೆಗೆ ನಿರ್ವಹಣೆ ಮಾಡಬಹುದಾಗಿದೆ. ಧಾರವಾಡ ಜಿಲ್ಲೆಯ 5 ಸ್ಥಳಿಯ ಸಂಸ್ಥೆಗಳಲ್ಲಿ 100 ವಾರ್ಡ್ಗಳಿದ್ದು, 100 ವಾರ್ಡ್ಗಳಲ್ಲಿ ಪ್ರತಿ ದಿನ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಹುಬ್ಬಳ್ಳಿ&ಧಾರವಾಡ ಮಹಾನಗರದ ವ್ಯಾಪ್ತಿಯಲ್ಲಿ 82 ವಾರ್ಡ್ಗಳಿದ್ದು, ಅದರಲ್ಲಿ 13 ವಾರ್ಡ್ಗಳಲ್ಲಿ 24*7 ನೀರು ಪೊರೈಕೆ ಮಾಡಲಾಗುತ್ತಿದೆ. ಉಳಿದ ವಾರ್ಡ್ಗಳಲ್ಲಿ 2 ರಿಂದ 6 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ನೀರನ್ನು ಮಿತವಾಗಿ ಬಳಸಲು ಸಲಹೆ:
ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗಬಹುದು. ಹೀಗಾಗಿ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸುವುದು ಮತ್ತು ಸಂರಸುವುದು ಅತ್ಯಗತ್ಯವಾಗಿದೆ. ಶವರ್ ಬಳಸುವ ಬದಲು ಬಕೆಟ್ ಮತ್ತು ಮಗ್ ಬಳಸಿ. ಹಲ್ಲುಜ್ಜುವಾಗ ಅಥವಾ ಮುಖ ತೊಳೆಯುವಾಗ ನಲ್ಲಿಯನ್ನು ಸದಾ ತೆರೆದಿಡದೆ, ಅಗತ್ಯಕ್ಕೆ ತಕ್ಕಂತೆ ನೀರನ್ನು ಲೋಟದಲ್ಲಿ ಸಂಗ್ರಹಿಸಿ ಬಳಸಬೇಕು. ಪಾತ್ರೆ ತೊಳೆಯುವಾಗ ನಲ್ಲಿಯನ್ನು ರ್ಪೂತಿಯಾಗಿ ತೆರೆಯದೆ, ಸಣ್ಣ ಪ್ರಮಾಣದಲ್ಲಿ ನೀರು ಬಿಟ್ಟು ತೊಳೆಬೇಕು. ತರಕಾರಿ ತೊಳೆದ ನೀರನ್ನು ಬಿಸಾಡದೆ, ಅದನ್ನು ಗಿಡಗಳಿಗೆ ಹಾಕಬೇಕು.
ವಾಷಿಂಗ್ ಮಿಷನ್ನಲ್ಲಿ ಬಟ್ಟೆಗಳನ್ನು ಒಗೆಯುವಾಗ ರ್ಪೂಣ ಲೋಡ್ ಇರುವಾಗ ಮಾತ್ರ ಬಳಸಿ. ಇದು ವಿದ್ಯುತ್ ಮತ್ತು ನೀರು ಎರಡನ್ನೂ ಉಳಿಸುತ್ತದೆ. ಸೋರುವ ಒಂದು ಸಣ್ಣ ನಲ್ಲಿಯಿಂದ ದಿನಕ್ಕೆ ನೂರಾರು ಲೀಟರ್ ನೀರು ಪೋಲಾಗುತ್ತದೆ. ಹೀಗಾಗಿ ಮನೆಯಲ್ಲಿರುವ ಸೋರಿಕೆಯಾಗುವ ನಲ್ಲಿಗಳು, ಶವರ್ಗಳು ಅಥವಾ ಪೈಪ್ಗಳನ್ನು ತಣವೇ ದುರಸ್ತಿ ಮಾಡಿಸಿ.
ಶಾಲೆ-ಕಾಲೇಜು, ವಸತಿ ನಿಲಯ, ಶೌಚಗೃಹ ಅಥವಾ ಮೈದಾನದಲ್ಲಿ ನಲ್ಲಿಗಳು ಸೋರುತ್ತಿದ್ದರೆ ತಣ ಮುಚ್ಚಿ ಹಾಗೂ ತುರ್ತಾಗಿ ದುರಸ್ತಿಗೊಳಿಸಬೇಕು ಎಂದು ಸ್ನೇಹಲ್ ಆರ್. ತಿಳಿಸಿದ್ದಾರೆ.