ಸುತಗಟ್ಟಿ ಹೊರವಲಯದಲ್ಲಿ ಕಾಣಿಸಿದ್ದ ಚಿರತೆ. Leopard 
ಧಾರವಾಡ

ಸುತಗಟ್ಟಿ ಬಳಿ ಕಾಣಿಸಿದ ಚಿರತೆ Leopard

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ಕಾರಿನ ಹೆಡ್​ಲೈಟ್ ಬೆಳಕು ಚಿರತೆ ಮೇಲೆ ಬೀಳುತ್ತಿದ್ದಂತೆಯೇ ಸ್ಥಳದಿಂದ ಕಾಲ್ಕಿತ್ತಿದೆ.
  • ಅರಣ್ಯ ಇಲಾಖೆಗಾಗಿ 4 ತಂಡಗಳನ್ನು ರಚಿಸಿದೆ.
  • ಹುಲ್ಲುಗಾವಲಿಯನಲ್ಲಿ ಚಿರತೆ (Leopard) ಕುಳಿತಿದ್ದು ಕಾಣಿಸಿದೆ.
ಕಾರಿನಲ್ಲಿ ತೆರಳುತ್ತಿದ್ದ ಕೆಲವರಿಗೆ ರಸ್ತೆ ಬದಿಯ ಹುಲ್ಲುಗಾವಲಿಯನಲ್ಲಿ ಚಿರತೆ ಕುಳಿತಿದ್ದು ಕಾಣಿಸಿದೆ. ಕಾರಿನ ಹೆಡ್​ಲೈಟ್ ಬೆಳಕು ಚಿರತೆ ಮೇಲೆ ಬೀಳುತ್ತಿದ್ದಂತೆಯೇ ಸ್ಥಳದಿಂದ ಕಾಲ್ಕಿತ್ತಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ತಂಡ ಸುತಗಟ್ಟಿ ಹೊರವಲಯದಲ್ಲಿ ಹುಡುಕಾಡಿದರೂ, ಚಿರತೆ ಕಾಣಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆ ಸೆರೆಗಾಗಿ ಮೈಸೂರಿನಿಂದ ಮತ್ತೊಂದು ದೊಡ್ಡ ಬೋನ್ ತರಿಸಿ, ಗಾಮನಗಟ್ಟಿ ಹೊರವಲಯದಲ್ಲಿ ಇಡಲಾಗಿದೆ. ಈ ಮಧ್ಯೆ ಧಾರವಾಡದಿಂದಲೂ ಮತ್ತೊಂದು ಬೋನ್ ತರಿಸಿ, ಸುತಗಟ್ಟಿ ಹೊರವಲಯದಲ್ಲಿ ಇಡಲಾಗಿದೆ.
ವಿಮಾನ ನಿಲ್ದಾಣ ಹಾಗೂ ಗಾಮನಗಟ್ಟಿ ಹೊರವಲಯದ ವಿವಿಧೆಡೆ ಅಳವಡಿಸಿರುವ ಕ್ಯಾಮರಾ ಟ್ರಾ್ಯಪರ್​ಗಳ ಕಣ್ಣಿಗೂ ಬೀಳದೇ ಚಿರತೆ ವಿಮಾನ ನಿಲ್ದಾಣದಿಂದ ಹೊರಗೆ ಬಂದಿದೆ.
ಚಿರತೆ ಸೆರೆಗಾಗಿ ಅರಣ್ಯ ಇಲಾಖೆಗಾಗಿ 4 ತಂಡಗಳನ್ನು ರಚಿಸಿ, ನಿತ್ಯ ರಾತ್ರಿಯೆಲ್ಲ ಹುಡುಕಾಡುತ್ತಿದ್ದರೂ ಇದುವರೆಗೆ ಸಫಲವಾಗಿಲ್ಲ.