ಸಾಂದರ್ಭಿಕ ಚಿತ್ರ 
ಧಾರವಾಡ

Leopard attack: ಮೇಯಿಸಲು ತೆರಳಿದಾಗ ಚಿರತೆ ದಾಳಿ

ಮಂಜುನಾಥ ಗದಗಿನ
ಕಲಘಟಗಿ: ತಾಲೂಕಿನ ತುಮ್ಮರಿಕೊಪ್ಪ ಗ್ರಾಮದ ಅರಣ್ಯ ಪ್ರದೇಶದಂಚಿನಲ್ಲಿರುವ ಹಾಲೋಡಿಕೆರೆ ಹತ್ತಿರ ರೈತರು ಹುಲ್ಲು ಮೇಯಿಸಲು ತೆರಳಿದಾಗ ಆಡು ಹಾಗೂ ಆಕಳು ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಶುಕ್ರವಾರ ಜರುಗಿದೆ.
ಗ್ರಾಮದ ಯಲ್ಲಪ್ಪ ಸಂತಪ್ಪನವರ ಎಂಬುವವರಿಗೆ ಸೇರಿದ ಆಕಳು ಕರು, ಪಕ್ಕೀರೇಶ ದೇಸಾಯಿ ಅವರಿಗೆ ಸೇರಿದ ಆಡುಗಳು, ಶ್ರೀನಾಥ ಸಂತಪ್ಪನವರ ಹಾಗೂ ಮಾರ್ಟೀನ್ ಹಗ್ಗಿಮನಿ ಅವರಿಗೆ ಸೇರಿದ ಸಾಕು ನಾಯಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ ಎಂಬ ಮಾಹಿತಿ ಇದೆ.
ಮನವಿ: ತುಮ್ಮರಿಕೊಪ್ಪ ಗ್ರಾಮದ ಅರಣ್ಯದಂಚಿನ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲೂ ಸೋಲಾರ್ ಫೆನ್ಸಿಂಗ್ (ವಿದ್ಯುತ್ ಬೇಲಿ) ಅಳವಡಿಸಲು ಗ್ರಾಮಸ್ಥರ ಅರಣ್ಯ ಇಲಾಖೆಗೆ ಶನಿವಾರ ಮನವಿ ಸಲ್ಲಿಸಿದರು. ನಮ್ಮ ಗ್ರಾಮದಲ್ಲಿ ಅನೇಕ ಹೊಲಗಳಿಗೆ ಚಿರತೆ, ಕಾಡು ಹಂದಿ, ಮುಳ್ಳುಹಂದಿ, ಜಿಂಕೆ, ಮಂಗ ಮುಂತಾದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ರೈತರ ಬೆಳೆಗಳು ನಾಶ ಮಾಡುತ್ತಿವೆ. ರೈತರು ತಮ್ಮ ಮನೆಯ ಕೆಲಸ ಮಾಡುವುದು ಬಿಟ್ಟು ಹಗಲು-ರಾತ್ರಿ ಪ್ರಾಣಿಗಳ ಕಾಯುವುದೆ ಆಗಿದೆ. ಆದ್ದರಿಂದ ಕೂಡಲೆ ಸೋಲಾರ್ ಫೆನ್ಸಿಂಗ್ ಅಳವಡಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅರಣ್ಯ ದಂಚಿನಲ್ಲಿ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿವೆ ಧನ-ಕರುಗಳು ಮೇಯಿಸುವಾಗ ರೈತರು ಎಚ್ಚರ ವಹಿಸಬೇಕು. ಸೋಲಾರ್ ಫೆನ್ಸಿಂಗ್ ಅಳವಡಿಸಲು ಮನವಿ ನೀಡಿದ್ದು, ಪರಿಶೀಲಿಸಿ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ವಲಯ ಅರಣ್ಯಧಿಕಾರಿ ಅರುಣ ಕುಮಾರ ಅಷ್ಟಗಿ ತಿಳಿಸಿದರು.