`ಪರೀಕ್ಷೆಗಳು ಅಂದು-ಇoದು' ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ.
ಧಾರವಾಡ: ಹೆಚ್ಚಿನ ಅಂಕ ಗಳಿಸಲು ಆಳವಾದ ಅಧ್ಯಯನ, ಪರೀಕ್ಷೆ ಬಗ್ಗೆ ಸಕಾರಾತ್ಮಕ ಚಿಂತನೆ ಬಹಳ ಮುಖ್ಯ ಎಂದು ಧಾರವಾಡ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷ ಮನೋಹರ ಎನ್.ಮೋರೆ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಛತ್ರಪತಿ ಶಿವಾಜಿ ಮಹಾರಾಜ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ `ಪರೀಕ್ಷೆಗಳು ಅಂದು-ಇoದು' ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅತಿಥಿ ಉಪನ್ಯಾಸಕ, ಶಿಕ್ಷಣ ತಜ್ಞ ಎಂ.ಎo.ಚಿಕ್ಕಮಠ ಉಪನ್ಯಾಸ ನೀಡಿ, ಪರೀಕ್ಷೆಗಳು ಜೀವನದ ಅವಿಭಾಜ್ಯ ಅಂಗವಿದ್ದAತೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಜೀವನದಲ್ಲಿ ಯಶಸ್ಸು ಸುಮ್ಮನೆ ಸಿಗದು, ನಿರಂತರ ಪ್ರಯತ್ನ ಅಗತ್ಯ. ಅಧ್ಯಯನದಲ್ಲಿ ಕಂಠಪಾಠ ಪ್ರವೃತ್ತಿ ಸರಿಯಲ್ಲ. ಪಠ್ಯಪುಸ್ತಕವೇ ವಿದ್ಯಾರ್ಥಿಗಳ ಸೊತ್ತು. ಮನಸ್ಸು ಗೊಂದಲದಲ್ಲಿದ್ದಾಗ ಓದಬಾರದು. ಆಸಕ್ತಿ ಅಭಿರುಚಿ ಮುಖ್ಯ. ತ್ಯಾಗ, ದೃಢ ನಿರ್ಧಾರ ಬಹಳ ಮುಖ್ಯ. ಪರೀಕ್ಷೆ ಬಗ್ಗೆ ಭಯ ಬೇಡ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಡಳದ ಗೌರವ ಕಾರ್ಯದರ್ಶಿ ರಾಜು ಆರ್. ಬಿರಜೆನವರ ಮಾತನಾಡಿ, ಕವಿವ ಸಂಘವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿ ಮಾಡುತ್ತಿರುವ ಈ ಪ್ರಯತ್ನ ಅಭಿನಂದನೀಯ ಎಂದರು.
ಮAಡಳದ ನಿರ್ದೇಶಕ ರಾಜು ಕಾಳೆ, ಶಿವಾಜಿ ಸೂರ್ಯವಂಶಿ, ಶಿಕ್ಷಣ ಮಂಟಪದ ಸಲಹಾ ಸಮಿತಿಯ ಪ್ರೊ.ಬಿ.ಎಂ.ಕೋಟಿಗೌಡ್ರ, ಶ್ರೀಕಾಂತ ಯಲಿಗಾರ, ಚಂದ್ರು ಮುತ್ತಗಿ, ಸೀತಾ ಸಾತಿಹಾಳ ವೇದಿಕೆಯಲ್ಲಿದ್ದರು. ಪ್ರಾಚಾರ್ಯೆ ಶೈಲಶ್ರೀ ಸಂಕೋಜಿ ಸ್ವಾಗತಿಸಿ ನಿರೂಪಿಸಿದರು. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ನೆಲ್ಲಿಗಣಿ ವಂದಿಸಿದರು.