ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ (Ambedkar) ಅವರ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಡಾ. ಅಂಬೇಡ್ಕರ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ, ಶಾಸಕ ಮಹೇಶ ಟೆಂಗಿನಕಾಯಿ, ಅಶೋಕ ಕಾಟವೆ, ಲಿಂಗರಾಜ ಪಾಟೀಲ, ಡಾ. ಕ್ರಾಂತಿ ಕಿರಣ, ರೂಪಾ ಶೆಟ್ಟಿ, ಇನ್ನಿತರರು ಇದ್ದರು.  
ಧಾರವಾಡ

ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿ (Ambedkar )

ಪ್ರಮುಖ ಮುಖ್ಯಾಂಶಗಳು

  • ದಲಿತರಿಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಕರೆ.
  • ಜಗತ್ತಿನ ಅತಿ ಶ್ರೇಷ್ಠ ಸಂವಿಧಾನ ಭಾರತದ್ದಾಗಿದೆ.
  • ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ 69ನೇ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ ಅವರು ಜೀವಂತ ಇದ್ದಾಗ ಅವರಿಗೆ ಕಾಂಗ್ರೆಸ್ ಹಲವಾರು ಬಾರಿ ಅವಮಾನ ಮಾಡಿದೆ. ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೇ, ದೆಹಲಿಯಲ್ಲಿ ವಾಸಿಸಲು ಮನೆಯನ್ನೂ ನೀಡಲಿಲ್ಲ. ಅಷ್ಟೇ ಅಲ್ಲ, ಅವರು ಮೃತರಾದಾಗ ಅಂತ್ಯಕ್ರಿಯೆ ಸಂದರ್ಭದಲ್ಲಿಯೂ ಸಾಕಷ್ಟು ಕಿರುಕುಳ ನೀಡಿದೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಇಡೀ ದೇಶ ಡಾ. ಅಂಬೇಡ್ಕರ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯುತ್ತಿದೆ. ಅವರು ಕೇವಲ ತಮ್ಮ ಕುಟುಂಬದ ಬಗ್ಗೆ ಚಿಂತಿಸದೇ, ಇಡೀ ದೇಶ ಅವರ ಕುಟುಂಬ ಎಂಬಂತೆ ಆಲೋಚಿಸುತ್ತಿದ್ದರು ಎಂದರು.
ಅವರಿಗೆ ಅಂದಿನ ಕಾಂಗ್ರೆಸ್ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕಿತ್ತು. ಆದರೆ, ಕಾಂಗ್ರಸ್ ಅಂಬೇಡ್ಕರ್ ಅವರ ಹೆಸರಿನಲ್ಲಿ ದಲಿತರನ್ನು ಸದಾ ಮತಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ಆರೋಪಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಜಗತ್ತಿನ ಅತಿ ಶ್ರೇಷ್ಠ ಸಂವಿಧಾನ ಭಾರತದ್ದಾಗಿದೆ. ಅವರು ಹಾಕಿಕೊಟ್ಟಿರುವ ಮಾರ್ಗ ಅನುಸರಿಸುವ ಮೂಲಕ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.
ಡಾ. ಕ್ರಾಂತಿ ಕಿರಣ ಮಾತನಾಡಿ, ಡಾ. ಅಂಬೇಡ್ಕರ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು.
ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಸೀಮಾ ಲದ್ವಾ, ಮಾಜಿ ಶಾಸಕ ಅಶೋಕ ಕಾಟವೆ, ಜಿಲ್ಲಾ ಎಸ್​ಸಿ ಮೋರ್ಚಾ ಅಧ್ಯಕ್ಷ ಹನಮಂತ ಹರಿವಾಣ, ವಸಂತ ನಾಡಜೋಶಿ, ರಾಜು ಕಾಳೆ, ಕರುಣಾಕರ ಖಾಸಲೆ, ರಾಜು ಕೋರ್ಯಾಣಮಠ, ಪ್ರಕಾಶ ಕ್ಯಾರಕಟ್ಟಿ, ಮಂಜುನಾಥ ಕೊಂಡಪಲ್ಲಿ, ಸವಿತಾ ಚವ್ಹಾಣ, ಮೇಘನಾ ಶಿಂಧೆ, ಇತರರು ಇದ್ದರು.