kuruhinashetty samaja ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕುರುಹಿನ ಶೆಟ್ಟಿ ಪತ್ತಿನ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭ ಹಾಗೂ 25ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.
ಹುಬ್ಬಳ್ಳಿ: ಕುರುಹಿನ ಶೆಟ್ಟಿ kuruhinashetty samaja ಪತ್ತಿನ ಸಹಕಾರಿ ಸಂಘವು ಹೆಚ್ಚಿನ ರೀತಿಯಲ್ಲಿ ಬೆಳೆಯಬೇಕು. ಇದರಿಂದ ಸಮಾಜಕ್ಕೆ ಅನುಕೂಲವಾಗಬೇಕು ಮತ್ತು ದುಡಿಯಲು ಬಯಸುವವರಿಗೆ ಹಣಕಾಸಿನ ನೆರವು ನೀಡುವಂತಾಗಬೇಕು ಎಂದು ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕುರುಹಿನ ಶೆಟ್ಟಿ ಪತ್ತಿನ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭ ಹಾಗೂ 25ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
25 ವರ್ಷಗಳ ಹಿಂದೆ ಸಮಾಜದ ಅಭಿವೃದ್ಧಿ ಬಯಸಿ ನೆಟ್ಟ ಸಸಿಯು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ನೆರಳಿನಡಿ ಎಲ್ಲ ಸಮಾಜದವರು ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಸಂಘದ ನಿರ್ದೇಶಕ ಎಂ.ಬಿ. ರೋಣದ ಮಾತನಾಡಿ, ಸಂಘವು ಸಣ್ಣಮಟ್ಟದಲ್ಲಿ ಆರಂಭವಾಗಿ ಬೃಹದಾಕಾರವಾಗಿ ಬೆಳೆದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಶಾಖೆ ತೆರೆದು ಸಮಾಜದ ಒಳತಿಗೆ ವಿನಿಯೋಗಿಸಲಾಗುವುದು ಎಂದರು.
ಅಧ್ಯಕ್ಷ ಚಂದ್ರಶೇಖರ ಶಿರಹಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಎಂ.ಪಿ. ಶಿವಕುಮಾರ, ನಿರ್ದೇಶಕರಾದ ಸೋಮಶೇಖರ ಕೊಂಡಗೋಳಿ, ಬಸಪ್ಪ ಡಂಬಳ, ವರುಣ್ ಸಂಗನಾಳ, ರಾಜಶೇಖರ ನೂಲ್ವಿ, ಮಂಜುನಾಥ ಕಲಬಾವಿ, ಆನಂದ ಮುತ್ತಗಿ, ಸೌಭಾಗ್ಯ ನೀಲನೂರ, ಶಶಿಕಲಾ ಕಲಭಾವಿ, ನಿಂಗಪ್ಪ ಬಂಕಾಪುರ, ಕೆಸಿಸಿ ಬ್ಯಾಂಕಿನ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ಹುಬ್ಬಳ್ಳಿಯ ಸಿಡಿಒ ರೇಷ್ಮಾ ಮಖಾನದಾರ ಇತರರಿದ್ದರು.
ಇದೇ ವೇಳೆ ಪ್ರವರ್ತಕರು, ಹಿಂದಿನ ಅವಧಿಯ ನಿರ್ದೇಶಕರು ಹಾಗೂ ಹಾಲಿ ನಿರ್ದೇಶಕರನ್ನು ಸನ್ಮಾನಿಸಲಾಯಿತು
ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಮುದೇನೂರ ಸ್ವಾಗತಿಸಿದರು. ಅಪೇಕ್ಷ ನೀಲನೂರ ಪ್ರಾರ್ಥಿಸಿದರು.