ಟೆಂಪರಲ್ ಬೋನ್ ಡಿಸ್ಸೆ ಕ್ಷಣ ಕಾರ್ಯಾಗಾರ' ಉದ್ಘಾಟನೆ
ಧಾರವಾಡ: ವಿದ್ಯಾರ್ಥಿಗಳಿಗೆ ಟೆಂಪರಲ್ ಬೋನ್ ಡಿಸ್ಸೆ ಕ್ಷಣ ಮತ್ತು ಅದರ ಅಧ್ಯಯನವು ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಾಗಿದೆ. ವೈದ್ಯಕೀಯ ಶಿಕ್ಷಣಕ್ಕೆ ದೇಹದಾನ ಮಾಡಿದ ಕುಟುಂಬಗಳಿಗೆ ನಾವು ಸದಾ ಕೃತಜ್ಞರಾಗಿರಬೇಕು ಎಂದು ಎಸ್‌ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ಕುಮಾರ ಹೇಳಿದರು.
ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಕಿವಿ, ಮೂಗು, ಗಂಟಲು ಚಿಕಿತ್ಸಾ ವಿಭಾಗವು ಈಚೆಗೆ ಆಯೋಜಿಸಿದ್ದ `ಟೆಂಪರಲ್ ಬೋನ್ ಡಿಸ್ಸೆ ಕ್ಷಣ ಕಾರ್ಯಾಗಾರ' ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯರು ತಮ್ಮಲ್ಲಿನ ಜ್ಞಾನವನ್ನು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ಸಂತೃಪ್ತಿ ಹೊಂದಬಹುದು. ವಿದ್ಯಾರ್ಥಿಗಳು ನಿರಂತರ ವಿವಿಧ ವೈದ್ಯಕೀಯ ಕಾರ್ಯಾಗಾರಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿರಬೇಕು. ವೃತ್ತಿಯನ್ನು ಬದ್ದತೆ ಮತ್ತು ಜಾಗರೂಕತೆಯಿಂದ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಸಹ ಕುಲಪತಿ ಜೀವಂಧರ್ ಕುಮಾರ್, ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಪ್ರಾಚಾರ್ಯ ಡಾ. ವಿಜಯ್ ಕುಲಕರ್ಣಿ, ವೈದ್ಯಕೀಯ ಅಧೀಕ್ಷಕ ಡಾ. ಕಿರಣ್ ಹೆಗ್ಡೆ, ಉಪ ಪ್ರಾಚಾರ್ಯ ಡಾ. ಕಿರಣ್ ಐತಾಳ್, ದಯಾನಂದ ಸಾಗರ, ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಹಿರಿಯ ಪ್ರಾಧ್ಯಾಪಕ ಡಾ. ಅಶೋಕ್ ನಾಯ್ಕ್, ಡಾ. ಅರುಣ್ ಕುಮಾರ್ ಕಾರ್ಯಾಗಾರಕ್ಕೆ ತಾಂತ್ರಿಕ ಬೆಂಬಲ ನೀಡಿದರು. ಕಿವಿ, ಮೂಗು, ಗಂಟಲು ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ ಡಾ. ರಘುನಾಥ ಶಾನಬಾಗ ಸ್ವಾಗತಿಸಿದರು. ಡಾ. ಅಭಿಜ್ಞಾ ಶೆಟ್ಟಿ ನಿರೂಪಿಸಿದರು. ಡಾ. ಮಂಜುನಾಥ ವಂದಿಸಿದರು.