Krishik building ಹುಬ್ಬಳ್ಳಿ ಎಪಿಎಂಸಿ ಆವರಣದಲ್ಲಿ ಕೃಷಿಕ ಸಮಾಜದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಶಾಸಕರಾದ ಮಹೇಶ ಟೆಂಗಿನಕಾಯಿ, ಎನ್​.ಎಚ್​. ಕೋನರಡ್ಡಿ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಕೃಷಿಕ ಸಮಾಜದ ನಗರದ ಮಹಾದೇವಪ್ಪ, ಕರಬಸಪ್ಪ ಬೆಟಗೇರಿ, ಮಲ್ಲನಗೌಡ ಪಾಟೀಲ ಇತರರು ಇದ್ದರು. 
ಧಾರವಾಡ

Krishik building ಹುಬ್ಬಳ್ಳಿ ಕೃಷಿಕ ಸಮಾಜ ಕಟ್ಟಡಕ್ಕೆ ಭೂಮಿಪೂಜೆ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • ರೈತರು ಕೃಷಿಕರ ಬಹುದಿನದ ಬೇಡಿಕೆ
  • ಸುಸಜ್ಜಿತ ಕಟ್ಟಡದಿಂದ ರೈತರಿಗೆ ಅನುಕೂಲ
ಹುಬ್ಬಳ್ಳಿ: Krishik building ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದಲ್ಲಿ ತಾಲೂಕು ಕೃಷಿಕ ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ರೈತರು, ಕೃಷಿಕರ ಬಹುದಿನದ ಬೇಡಿಕೆಯಾದ ಕಟ್ಟಡ ಕಾಮಗಾರಿಗೆ ಶಾಸಕರಾದ ಎನ್​.ಎಚ್​. ಕೋನರಡ್ಡಿ ಹಾಗೂ ಮಹೇಶ ಟೆಂಗಿನಕಾಯಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎನ್​.ಎಚ್​. ಕೋನರಡ್ಡಿ, ಕೃಷಿಕ ಸಮಾಜದ ಕಟ್ಟಡಕ್ಕೆ ಒಂದು ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಸುಸಜ್ಜಿತ ಕಟ್ಟಡ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಈಗಾಗಲೇ ನವಲಗುಂದ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ಗ್ರಾಮೀಣ, ನವಲಗುಂದ ತಾಲೂಕು ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ಕೃಷಿಕ ಸಮಾಜದಿಂದ ತಲಾ 10 ಲಕ್ಷ ರೂ. ನಿವೇಶನ ಖರೀದಿಸಲು ಅಂದಿನ ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ. ಮಂಜುನಾಥಗೌಡ ಅವರು ಅನುದಾನ ಬಿಡುಗಡೆ ಮಾಡಿದ್ದು, ಈಗಾಗಲೇ ನಿವೇಶನ ಖರೀದಿಸಲಾಗಿದೆ ಎಂದರು.
ಮೇಯರ್​ ಜ್ಯೋತಿ ಪಾಟೀಲ ಮಾತನಾಡಿ, ಮಹಾನಗರ ಪಾಲಿಕೆಯಿಂದ ಅನುದಾನ ನೀಡಲು ಅವಕಾಶ ಇದ್ದರೆ ಸಭೆಯಲ್ಲಿ ಮಂಡಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.