Dot ಅಂತಾರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕರಾದ ಡಾ. ಪ್ರವೀಣ ಗೋಡಖಿಂಡಿ ಅವರು ಹಾಗೂ ಧಾರವಾಡದ ಹೆಸರಾಂತ ರಂಗನಟ ರವಿ ಕುಲಕರ್ಣಿ. 
ಧಾರವಾಡ

ಕೊಳಲು ಡಾಟ್ ಕಾಮಿಡಿ ನಾಟಕ ಪ್ರದರ್ಶನ Dot

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • 22ರಂದು ಸವಾಯಿ ಗಂಧರ್ವ ಹಾಲ್​ನಲ್ಲಿ ಪ್ರದರ್ಶನ
  • ಕಲಾಭಿಮಾನಿಗಳಿಗೆ ಉಚಿತ ಪ್ರವೇಶ ಇದೆ.
  • ಹಿಂದೂಸ್ತಾನಿ ಸಂಗೀತಗಾರರೊಬ್ಬರ ಸುತ್ತ ಸಾಗುವ ಕಥೆ
ಈ ನಾಟಕ ಪ್ರದರ್ಶನ ಅಂತಾರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕರಾದ ಡಾ. ಪ್ರವೀಣ ಗೋಡಖಿಂಡಿ ಅವರ ಪರಿಕಲ್ಪನೆ, ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರಲಿದೆ.

ಕಲಾಭಿಮಾನಿಗಳಿಗೆ ಉಚಿತ ಪ್ರವೇಶ ಇದೆ.

ನಾಟಕದ ಮುಖ್ಯಾಂಶ: ವಿಶಿಷ್ಟ ಕಥಾಹಂದರ, ಕಟ್ಟುನಿಟ್ಟಾದ ಹಿಂದೂಸ್ತಾನಿ ಸಂಗೀತಗಾರರೊಬ್ಬರ ಸುತ್ತ ಸಾಗುವ ಈ ಕಥೆ, ಶಾಸ್ತಿ್ರಯ ಸಂಗೀತದ ಗಾಂಭೀರ್ಯತೆಯನ್ನು ಉಳಿಸಿಕೊಂಡೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ.

ನಾಟಕದ ಪ್ರಮುಖ ಆಕರ್ಷಣೆಯಾಗಿ ಸ್ವತಃ ಡಾ. ಪ್ರವೀಣ ಗೋಡಖಿಂಡಿ ಅವರು ಹಾಗೂ ಧಾರವಾಡದ ಹೆಸರಾಂತ ರಂಗನಟ ರವಿ ಕುಲಕರ್ಣಿ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

90 ನಿಮಿಷಗಳ ನಾಟಕದ ನಂತರ ಪಂ. ಪ್ರವೀಣ ಗೋಡಖಿಂಡಿಯವರ ಜೀವನ ಸಂಗೀತ ಸಾಧನೆಯಲ್ಲಿ ನಡೆದ ದಾರಿ ಕುರಿತು ಅವರೊಂದಿಗೆ ಸಂದರ್ಶನ ನಡೆಯಲಿದೆ.

ರಂಗಭೂಮಿ ನಾಟಕಕಾರ ಹಾಗೂ ನಿರ್ದೇಶಕ ದಿ. ಯಶವಂತ ಸರದೇಶಪಾಂಡೆ ಅವರ ಸ್ಮರಣಾರ್ಥ ನಡೆಯುವ ಈ ನಾಟಕಕ್ಕೆ ಕಿರಣ ಗೋಡಖಿಂಡಿ ಹಿನ್ನೆಲೆ ಸಂಗೀತ ಮತ್ತು ರಂಗಸಜ್ಜಿಕೆ ನೀಡಿದ್ದಾರೆ. ಸಾರಿಕಾ ಗೋಡಖಿಂಡಿ ವಸ್ತ್ರ್ರನ್ಯಾಸ ಹಾಗೂ ಧ್ವನಿ ವಿಭಾಗವನ್ನು ಮತ್ತು ರಘುಪತಿ ಶೃಂಗೇರಿ ಕ್ಯಾರಿಕೇಚರ್ ಕೆಲಸ ನಿರ್ವಹಿಸಿದ್ದಾರೆ.