kotturu basava ಬಸವೇಶ್ವರ ದೇವಸ್ಥಾನ.
ಹುಬ್ಬಳ್ಳಿ: kotturu basava ತಾಲೂಕಿನ ಅಮರಗೋಳದಲ್ಲಿ ಶ್ರೀ ಕೊಟ್ಟೂರು ಬಸವೇಶ್ವರ ಜಾತ್ರಾ ಮಹೋತ್ಸವ ಏಪ್ರಿಲ್ 16ರಿಂದ ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಜಾತ್ರೋತ್ಸವ ಅಂಗವಾಗಿ ಮಾ. 31ರಿಂದ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಐದು ವಾರ ಗ್ರಾಮದೇವತೆಯರ ಉಡಿ ತುಂಬುವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಕುಂದಗೋಳ ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜನವರು, ವೇದಮೂರ್ತಿ ಗದಗಯ್ಯ ಹಿರೇಮಠ, ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಶಿಕಾಂತ ಗುರೂಜಿ, ವೇದಮೂರ್ತಿ ಚಂದ್ರಸ್ವಾಮಿ ಹಿರೇಮಠ, ಶ್ರೀ ಡಾ. ಶಿವಕುಮಾರ ಸ್ವಾಮೀಜಿ, ಮಲ್ಲಯ್ಯ ಹೊನ್ನಾಪುರಮಠ, ಶ್ರೀ ಮರುಳಶಿದ್ದ ಶಿವಾಚಾರ್ಯ ಸ್ವಾಮೀಜಿ, ಗುರುಸಿದ್ದಯ್ಯ ಆಯಟ್ಟಿ ಅವರು ವಹಿಸುವರು.
ಏ. 19ರಂದು ರಾತ್ರಿ 9.30ಕ್ಕೆ ಸ್ವರ ಸಿಂಚನ ಮೆಲೊಡಿಸ್ ಆರ್ಕೆಸ್ಟ್ರಾ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಏ. 20ರಂದು ಬೆಳಗ್ಗೆ 6.15ಕ್ಕೆ ಕೊಟ್ಟೂರು ಬಸವೇಶ್ವರ ಹಾಗೂ ದುಂಡಿ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ನಡೆಯಲಿದೆ.
ಮಧ್ಯಾಹ್ನ 12.15ಕ್ಕೆ ಪಲ್ಲಕ್ಕಿ ಉತ್ಸವ, ಎತ್ತುಗಳ ಮೆರವಣಿಗೆ ವಿವಿಧ ವಾದ್ಯಮೇಳದೊಂದಿಗೆ ನಡೆಯಲಿದೆ. ಸಂಜೆ 6ಕ್ಕೆ ಶ್ರೀಕೊಟ್ಟೂರು ಬಸವೇಶ್ವರ 58ನೇ ರಥೋತ್ಸವ ಜರುಗಲಿದೆ.
ಅಮರಗೋಳ ಹಾಗೂ ಸುತ್ತಲಿನ ಗ್ರಾಮಗಳು, ಬಡಾವಣೆ ಭಕ್ತರು ಪಾಲ್ಗೊಳ್ಳಬೇಕೆಂದು ಶ್ರೀಕೊಟ್ಟೂರು ಬಸವೇಶ್ವರ ಜಾತ್ರಾ ಸಮಿತಿ ಅಧ್ಯಕ್ಷ ಮಂಜುನಾಥ ಲದ್ದಿ ಮನವಿ ಮಾಡಿದ್ದಾರೆ.