ಧಾರವಾಡದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಮುಕ್ತ ದಿನ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು. 
ಧಾರವಾಡ

ವಿಧಿವಿಜ್ಞಾನ ಕೋರ್ಸ್​ ಬಗ್ಗೆ ತಿಳಿವಳಿಕೆ ಅಗತ್ಯ

ಮಂಜುನಾಥ ಅಂಗಡಿ
ಧಾರವಾಡ: ವಿಧಿವಿಜ್ಞಾನ ಕೋರ್ಸ್​ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಕೋರ್ಸ್​ನ ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾಥಿರ್& ಪಾಲಕರು ಮಾಹಿತಿ ಹೊಂದಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದಲ್ಲಿ (ಎನ್​ಎ್​ಎಸ್​ಯು) ಶನಿವಾರ ಆಯೋಜಿಸಿದ್ದ ಮುಕ್ತ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ವಿಧಿವಿಜ್ಞಾನದ ಪಾತ್ರ ಹಿರಿದಾಗಿದೆ. ಮುಕ್ತ ದಿನ ಕಾರ್ಯಕ್ರಮದಲ್ಲಿ ಪ್ರದಶಿರ್ಸಿರುವ ಮಾದರಿಗಳ ಪ್ರದರ್ಶನವನ್ನು ಶಾಲಾ- ಕಾಲೇಜು ವಿದ್ಯಾಥಿರ್ಗಳು ನೋಡಿ ಮಾಹಿತಿ ಹೊಂದಬೇಕು ಎಂದರು.
ಪಾಲಿಕೆ ಮೇಯರ್​ ಜ್ಯೋತಿ ಪಾಟೀಲ, ಸಭಾನಾಯಕ ಈರೇಶ ಅಂಚಟಗೇರಿ, ಎನ್​ಎ್​ಎಸ್​ಯು ನಿರ್ದೇಶಕ ಡಾ. ಮಂಜನಾಥ ಘಾಟೆ, ವಾಲ್ಮಿ ನಿರ್ದೇಶಕ ಡಾ. ಗಿರೀಶ ಮರಡ್ಡಿ, ಇತರರಿದ್ದರು.
ಅನ್ವೇಷಿಸಿ, ಅವಿಷ್ಕರಿಸಿ, ಹೊಸತನ್ನು ತಿಳಿದುಕೊಳ್ಳಿ ಪರಿಕಲ್ಪನೆಯಡಿ ಆಯೋಜಿಸಿರುವ ಮುಕ್ತ ದಿನ ಕಾರ್ಯಕ್ರಮದಲ್ಲಿ ಅಪಘಾತ, ಡಿಜಿಟಲ್​ ಕೆಂ, ಸೈಬರ್​ ಕೆಂ ಮಾದರಿಗಳನ್ನು ಪ್ರದಶಿರ್ಸಲಾಗಿತ್ತು. ವಿದ್ಯಾಥಿರ್ಗಳು ಅಪರಾಧಗಳ ತನಿಖೆಯಲ್ಲಿ ವಿಧಿವಿಜ್ಞಾನದ ಪಾತ್ರ, ಸಾ ಸಂಗ್ರಹ, ಡಿಎನ್​ಎ ಪರೀೆ, ಬೆರಳಚ್ಚು ತಂತ್ರಜ್ಞಾನದ ಕುರಿತು ಮಾದರಿಗಳ ಮೂಲಕ ವಿವರಿಸಿದರು.