knee implant ಹಿಪ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ 
ಧಾರವಾಡ

knee implant ಅತ್ಯಾಧುನಿಕ ತಂತ್ರಜ್ಞಾನದಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಹುಬ್ಬಳ್ಳಿ: ನಡೆಯುವ ಸಾಮರ್ಥ್ಯವನ್ನೇ knee implant ಕಳೆದುಕೊಂಡಿದ್ದ ಆಫ್ರಿಕಾ ಮೂಲದ 35 ವರ್ಷದ ಮಹಿಳೆ ಈಗ ಓಡಾಡುತ್ತಿದ್ದಾರೆ. ಇದಕ್ಕೆ ಕಾರಣ ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ (ಫೋರ್ಟಿಸ್ ನೆಟ್‌ವರ್ಕ್ ಆಸ್ಪತ್ರೆ) ವೈದ್ಯರು, ರೋಗಿಗೆ ತಕ್ಕಂತೆ ವಿನ್ಯಾಸಗೊಳಿಸಿದ 3ಡಿ ಪ್ರಿಂಟೆಡ್ ಟೈಟಾನಿಯಂ ಹಿಪ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಕಾರಣ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸ್ಥಿ ಮತ್ತು ಕೀಲು ಬದಲಿ ಶಸ್ತ್ರಚಿಕಿತ್ಸಕ ಹಾಗೂ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಸಿ.ಎಂ., ನನ್ನ ನೇತೃತ್ವದಲ್ಲಿ ತಜ್ಞರ ತಂಡವು ಸಾಮಾನ್ಯ ಹಿಪ್ ರಿಪ್ಲೇಸ್‌ಮೆಂಟ್ ಈ ರೋಗಿಗೆ ಸೂಕ್ತ ಪರಿಹಾರವಲ್ಲ ಎಂದು ನಿರ್ಧರಿಸಿತು. ಅಸ್ಥಿ ಚಿಕಿತ್ಸಾ ಕ್ಷೇತ್ರದಲ್ಲಿನ ಅತ್ಯಾಧುನಿಕ ತಂತ್ರಜ್ಞಾನವಾದ ರೋಗಿಗೆ ತಕ್ಕಂತೆ ವಿನ್ಯಾಸಗೊಳಿಸಿದ 3ಡಿ ಪ್ರಿಂಟೆಡ್ ಟೈಟಾನಿಯಂ ಇಂಪ್ಲಾಂಟ್ ಅನ್ನು ಬಳಸಲು ನಿರ್ಧರಿಸಲಾಯಿತು ಎಂದರು.
ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಇದೇ ಚಿಕಿತ್ಸಾ ಅವಧಿಯಲ್ಲಿ ಸಂಧಿವಾತದಿಂದ ತೀವ್ರವಾಗಿ ಹಾನಿಗೊಳಗಾಗಿದ್ದ ಮತ್ತೊಂದು ಹಿಪ್ ಜಾಯಿಂಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಲಾಗಿದೆ ಎಂದು ವಿವರಿಸಿದರು.
ಈ ಶಸ್ತ್ರ ಚಿಕಿತ್ಸೆಯಿಂದ ಎರಡೂ ಕಾಲುಗಳ ಉದ್ದವನ್ನು ಸಮಗೊಳಿಸಲಾಗಿದೆ. ಹಿಪ್ ಜಾಯಿಂಟ್ ಸ್ಥಿರತೆ ಲಭಿಸಿದೆ. ಸಹಜವಾದ ಹಿಪ್ ಚಲನೆ ಮರು ಸ್ಥಾಪಿಸಲಾಗಿದೆ. ನೋವಿಗೆ ಮುಕ್ತಿ ದೊರೆತಿದೆ. ಸ್ವತಂತ್ರವಾಗಿ ನಡೆಯುವ ಸಾಮರ್ಥ್ಯ ರೋಗಿಗೆ ಮರಳಿ ದೊರೆತಿದೆ ಎಂದರು.
ಶಸ್ತ್ರಚಿಕಿತ್ಸೆ ವೇಳೆ ಬಳಸಲಾದ ಇಂಪ್ಲಾಂಟ್ ಮಾದರಿಯನ್ನು ಡಾ. ಬಸವರಾಜ ಇದೇ ವೇಳೆ ಪ್ರಾತ್ಯಕ್ಷಿಕೆ ನೀಡಿದರು.
ಪ್ರದೀಪ ಬುಲುಬುಲೆ, ಮುತ್ತಣ್ಣ ಹಂಚಿನಾಳ ಸುದ್ದಿಗೋಷ್ಠಿಯಲ್ಲಿದ್ದರು.