ಎಲ್‌ಐಸಿ ಗೋಲ್ಡನ್ ಜುಬಿಲಿ ಫೌಂಡೇಷನ್ ವತಿಯಿಂದ (kmcri)ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ಸಂಚಾರಿ ರಕ್ತ ಸಂಗ್ರಹ ವಾಹನವನ್ನು ಸೋಮವಾರ ಹಸ್ತಾಂತರ ಮಾಡಲಾಯಿತು.
ಹುಬ್ಬಳ್ಳಿ: ಎಲ್‌ಐಸಿ ಗೋಲ್ಡನ್ ಜುಬಿಲಿ ಫೌಂಡೇಷನ್ ವತಿಯಿಂದ ಇಲ್ಲಿಯ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (kmcri) ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆಎಂಸಿಆರ್‌ಐಗೆ ಸಂಚಾರಿ ರಕ್ತ ಸಂಗ್ರಹ ವಾಹನವನ್ನು ಹಸ್ತಾಂತರ ಮಾಡಲಾಯಿತು.
ಎಲ್‌ಐಸಿ ಆಫ್ ಇಂಡಿಯಾ ಹಿರಿಯ ವಿಭಾಗೀಯ ವ್ಯವಸ್ಥಾಪಕ ಬಿ.ಎಸ್. ಚಕ್ರವರ್ತಿ ಹಸ್ತಾಂತರಿಸಿ ಮಾತನಾಡಿ, ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸಂಚಾರಿ ರಕ್ತ ಸಂಗ್ರಹ ವಾಹನ ಸಹಕಾರಿಯಾಗಲಿದೆ. ಅದೆಷ್ಟೋ ಬಡ ರೋಗಿಗಳ ಜೀವ ಉಳಿಸಲು ಸಹಕಾರಿಯಾಗಲಿದೆ ಎಂದರು.
ಉದ್ಯಮಿ ಗೋವಿಂದ ಜೋಶಿ ಮಾತನಾಡಿ, ಕಿಮ್ಸ್ ಅತ್ಯುತ್ತಮ ಸೇವೆ ಮಾಡುತ್ತಿದೆ. ಎಲ್‌ಐಸಿ ಗೋಲ್ಡನ್ ಜುಬಿಲಿ ಫೌಂಡೇಷನ್ ವತಯಿಂದ ಸಂಚಾರಿ ರಕ್ತ ಸಂಗ್ರಹ ವಾಹನ ದೇಣಿಗೆ ನೀಡಲಾಗಿದೆ. ಇದರ ಸದ್ಬಳಕೆಯಾಗಲಿದೆ ಎಂದು ಆಶಿಸಿದರು.
ಕೆಎಂಸಿ ಆರ್‌ಐ ನಿರ್ದೇಶಕ ಡಾ. ಈಶ್ವರ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾಚಾರ್ಯ ಡಾ. ಸೂರ್ಯಕಾಂತ ಕಲ್ಲೂರಾಯ, ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ಎಸ್. ರಾಜಾಶಂಕರ, ಎಲ್‌ಐಸಿ ಧಾರವಾಡ ಮಾರ್ಕೆಟಿಂಗ್ ಮ್ಯಾನೇಜರ್ ಎಸ್. ಪ್ರಮೋದ, ರೋಟರಿ ಕ್ಲಬ್ ಧಾರವಾಡ ಅಧ್ಯಕ್ಷ ಲಕ್ಷ್ಮೀಕಾಂತ ನಾಯಕ್, ಆರ್‌ಎಂಒ ಡಾ. ನಾಗರಾಜ ಚಾಂದಿ, ಡಾ. ಸುನಿತಾ ವೆರ್ಣೇಕರ, ಡಾ. ಲಕ್ಷ್ಮೀಕಾಂತ ಲೋಕರೆ, ಡಾ. ಕವಿತಾ ಏವೂರ, ಪದ್ಮವಾತಿ ಪಿ., ಸಿಎಒ ರಮೇಶ ಕಳಸದ ಇತರರಿದ್ದರು.