ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ kle university ಮಂಗಳವಾರ ಪ್ರದರ್ಶನಿಯ ಸಂಕಲನ ಬಿಡುಗಡೆ ಮಾಡಲಾಯಿತು. 
ಧಾರವಾಡ

kle university ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಯಲಿ

ಮರಿದೇವ ಹೂಗಾರ
ಹುಬ್ಬಳ್ಳಿ: ಇಲ್ಲಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ kle university ಇಂಜಿನಿಯರಿಂಗ್ ಮಾದರಿಗಳು ಮತ್ತು ಸಾಮಾಜಿಕ ನಾವೀನ್ಯ ಯೋಜನೆಗಳ ಪ್ರದರ್ಶನವಾದ ‘ಪ್ರಯೋಗ ಮತ್ತು ಅವಿನ್ಯಾ ವಸಂತ -2026’ ಕಾರ್ಯಕ್ರಮ ಮಂಗಳವಾರ ಸಂಪನ್ನಗೊಂಡಿತು.
ಕುಲಪತಿ ಡಾ. ಪ್ರಕಾಶ ತೆವರಿ ಮಾತನಾಡಿ, ಇಂಜಿನಿಯರಿಂಗ್ ಎಕ್ಸ್‌ಪ್ರೋರೇಷನ್ ಮತ್ತು ಸೋಷಿಯಲ್ ಇನ್ನೋವೇಷನ್ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಸೃಷ್ಟಿಗೆ ಸಹಕಾರಿಯಾಗಲಿದೆ. ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೌಶಲವನ್ನು ಉತ್ತೇಜಿಸುತ್ತದೆ ಎಂದರು.
ಇದೇ ವೇಳೆ ಪ್ರದರ್ಶನಿಯ ಸಂಕಲನ ಬಿಡುಗಡೆ ಮಾಡಲಾಯಿತು.
ಕುಲಸಚಿವ ಡಾ.ಬಿ.ಎಸ್. ಅನಾಮಿ, ಕಾರ್ಯನಿರ್ವಾಹಕ ಡೀನ್ ಪ್ರೊ.ಬಿ.ಎಲ್. ದೇಸಾಯಿ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ. ಉಮಾ ಮುದೇನಗುಡಿ, ವಿದ್ಯಾರ್ಥಿ ಕಲ್ಯಾಣದ ಡೀನ್ ಡಾ. ಸಂಜಯ ಕೊಟಬಾಗಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ. ವಿಜಯಲಕ್ಷ್ಮೀ ಎಂ., ವಿಎಲ್‌ಎಸ್‌ಐ ಮುಖ್ಯಸ್ಥೆ ಡಾ. ಸುಜಾತಾ ಕೊಟಬಾಗಿ, ಡಾ. ಸುನಿತಾ ಬೂದಿಹಾಳ, ಡಾ.ಜಿ.ಯು. ರಾಜು, ಡಾ. ನಿತಿನ್ ಕುಲಕರ್ಣಿ, ಪ್ರೊ.ವಿ.ಎ. ಗೌಡರ, ಇತರರಿದ್ದರು.
ದೇಶದ ವಿವಿಧ ಭಾಗಗಳಿಂದ 1,600ಕ್ಕೂ ಹೆಚ್ಚು ವಿದ್ಯಾರ್ಥಿಗಳು, 322 ತಂಡಗಳು, ಶಿಕ್ಷಣ ತಜ್ಞರು ಭಾಗವಹಿಸಿದ್ದರು. ಇಂಜಿನಿಯರಿಂಗ್ ಎಕ್ಸ್‌ಪ್ರೋರೇಷನ್ ಪಠ್ಯಕ್ರಮದ 182 ತಂಡಗಳು ಹಾಗೂ ಸೋಷಿಯಲ್ ಇನ್ನೋವೇಷನ್ ಪಠ್ಯಕ್ರಮದ 140 ತಂಡಗಳು ಆಗಮಿಸಿದ್ದವು. ಮಹಾರಾಷ್ಟ್ರದ ವಾಲ್ಚಂದ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಐವರು ಬೋಧಕರು, ಉಡುಪಿ, ಹೈದರಾಬಾದ್, ಚಿನ್ಮಯ ವಿದ್ಯಾಲಯ, ಕೇಂದ್ರೀಯ ವಿದ್ಯಾಲಯದ ಬೋಧಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.