kle tech ಬಿವಿಬಿ ಮುಖ್ಯ ಕಟ್ಟಡದ ಎದುರು ಬಲೂನು ಹಾರಿ ಬಿಡುವ ಮೂಲಕ ನಿವೃತ್ತ ಸೇನಾ ಅಧಿಕಾರಿ ಕರ್ನಲ್​ ರಾಜೀವ್​ ಭಾರ್ಗವ ಅವರು ಪ್ಲೀಡಿಸ್​ ಉತ್ಸವಕ್ಕೆ ಚಾಲನೆ ನೀಡಿದರು. 
ಧಾರವಾಡ

kle tech ನೀವೂ ಉದ್ಯಮಿಯಾಗಬೇಕೆ? ಮಾರ್ಕೆಟ್ ಸ್ಟಡಿ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಕೆಎಲ್ಇ ಟೆಕ್ ವಿವಿಯಲ್ಲಿ ಪ್ಲೀಡಿಸ್ ಫೆಸ್ಟ್
  • ರಾಷ್ಟ್ರ ಮಟ್ಟದ ತಂತ್ರಜ್ಞಾನ ಸಾಂಸ್ಕೃತಿಕ ಉತ್ಸವಕ್ಕೆ ಅದ್ಭುತ ಸ್ಪಂದನೆ
ಹುಬ್ಬಳ್ಳಿ: kle tech ವಿದ್ಯಾರ್ಥಿ ದೆಸೆಯಿಂದಲೇ ಕಂಪನಿ ಅಥವಾ ಸ್ಟಾರ್ಟ್​ ಅಪ್​ ಕಡೆಗೆ ಒಲವು ತೋರಬೇಕು, ಆ ಮೂಲಕ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯಬೇಕು. ಉದ್ಯಮ ಆರಂಭಕ್ಕೆ 18ರಿಂದ 21 ವಯಸ್ಸು ಅತ್ಯಂತ ಸೂಕ್ತವಾದದ್ದು ಎಂದು ಬೋಟ್​ ಕಂಪನಿ ಸಹ ಸಂಸ್ಥಾಪಕ ಅಮನ್​ ಗುಪ್ತಾ ಹೇಳಿದರು.
ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯವು ವಿದ್ಯಾನಗರದ ಬಿ.ವಿ. ಭೂಮರಡ್ಡಿ ಕ್ಯಾಂಪಸ್​ನಲ್ಲಿ ಏರ್ಪಡಿಸಿರುವ ಮೂರು ದಿನಗಳ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನ- ಸಾಂಸ್ಕೃತಿಕ ಉತ್ಸವದಲ್ಲಿ ಅವರು ಶುಕ್ರವಾರ ಮೊದಲ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಇಂದು ಯಾವುದೇ ಕೆಲಸ ಶಾಶ್ವತವಲ್ಲ, ಬದಲಾದ ಮಾರುಕಟ್ಟೆಗೆ ಹೊಂದಿಕೊಂಡರೆ ಯಶಸ್ಸಿನತ್ತ ಸಾಗಬಹುದು. ನಿಮ್ಮ ಆಸಕ್ತಿಯನ್ನು ಮೊದಲು ಪತ್ತೆ ಹಚ್ಚಿಕೊಳ್ಳಿ, ಬಹಳಷ್ಟು ಜನರಿಗೆ ಅವರ ಆಸಕ್ತಿ ಕ್ಷೇತ್ರ ಯಾವುದೆಂದು ಗೊತ್ತೇ ಇರುವುದಿಲ್ಲ. ಹಾಗಾಗಿ ಏನಾದರೊಂದು ಉದ್ಯಮ ಆರಂಭಿಸಿ ಅಥವಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿ. ಅಧ್ಯಯನ ಮಾಡಿ, ತಾನಾಗಿಯೇ ಆಸಕ್ತಿ ಹುಟ್ಟುತ್ತದೆ. ನಿಮ್ಮ ಗ್ರಾಹಕರು, ಜಾಗತಿಕ ಮಾರುಕಟ್ಟೆಯನ್ನು ಸ್ಟಡಿ ಮಾಡಿದರೆ ಯಾವುದು ಸೂಕ್ತ ಎಂದು ತಾನಾಗಿಯೇ ಹೊಳೆಯುತ್ತದೆ ಎಂದರು.
ಬಿವಿಬಿ ಆವರಣವು ಸೃಜನಶೀಲ ಚಟುವಟಿಕೆಗಳಿಂದ ಚೈತನ್ಯಮಯವಾಗಿತ್ತು. ಮಡಕೆ ತಯಾರಿಕೆಯ ಮುಕ್ತ ಕಾರ್ಯಾಗಾರ, ಜೇಡಿಮಣ್ಣಿನೊಂದಿಗೆ ಕೆಲಸ ಮಾಡುವ ಸಾಂಪ್ರದಾಯಿಕ ಕಲೆಯನ್ನು ವಿದ್ಯಾರ್ಥಿಗಳು ಅನುಭವಿಸಿದರು.