ಹುಬ್ಬಳ್ಳಿಯಲ್ಲಿ (KLE Tech) ಶನಿವಾರ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಶೈಕ್ಷಣಿಕ ಸಾಧನೆಗಾಗಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು. 
ಧಾರವಾಡ

ಉದ್ದೇಶದಲ್ಲಿ (KLE Tech) ಸ್ಪಷ್ಟತೆಯಿದ್ದಲ್ಲಿ ಕನಸು ನನಸು

ಸಂತೋಷ ವೈದ್ಯ
ಹುಬ್ಬಳ್ಳಿ: ಅದ್ಭುತ (KLE Tech) ಅವಕಾಶಗಳು ಹಾಗೂ ನೈಜ ಸವಾಲುಗಳಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬೇಕಾದರೆ ಯುವಕರಲ್ಲಿ ನಮ್ರತೆ, ಸೃಜನಶೀಲತೆ, ಧೈರ್ಯ ಹಾಗೂ ಗುರಿ ಮುಟ್ಟುವ ಛಲ ಇರಬೇಕು. ಉದ್ದೇಶದಲ್ಲಿ ಸ್ಪಷ್ಟತೆ ಇದ್ದಲ್ಲಿ ಕನಸುಗಳನ್ನು ನನಸು ಮಾಡಿಕೊಳ್ಳಬಹುದು ಎಂದು ಮ್ಯಾಗ್ನಾ ಇಂಟರನ್ಯಾಷನಲ್ ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಸೀತಾರಾಮ ಕೋಟಗಿರಿ ಹೇಳಿದರು.
ಶನಿವಾರ ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಸುಧಾರಣೆಗೆ ಯಾವಾಗಲೂ ದೊಡ್ಡ ಪ್ರಯತ್ನಗಳೇ ಬೇಕೆಂದಿಲ್ಲ. ಜೀವನದಲ್ಲಿ ಕೆಲವೊಮ್ಮೆ ಅತ್ಯಂತ ಕಠಿಣ ಸಾಧನೆಯ ಯಶಸ್ಸು ಹೆಚ್ಚಾಗಿ ಕೊನೆಯ ಶೇ. 10ರಷ್ಟು ಪ್ರಯತ್ನದಲ್ಲಿ ಇರುತ್ತದೆ. ಹೆಚ್ಚಿನವರು ಈ ಪ್ರಯತ್ನವನ್ನು ಮಾಡುವುದಿಲ್ಲ. ಹಾಗಾಗಿ ಸಾಕಷ್ಟು ವ್ಯತ್ಯಾಸಗಳು ಉಂಟಾಗುತ್ತವೆ ಎಂದರು.
ನಿತ್ಯ ಬೆಳಿಗ್ಗೆ ಎಚ್ಚರಗೊಂಡಾಗ, ಇಂದು ನಾನು ಏನು ಉತ್ತಮವಾದುದನ್ನು ಮಾಡಬಲ್ಲೆ ಎಂದು ಪ್ರಶ್ನೆ ಹಾಕಿಕೊಂಡರೆ ಜೀವನ ನಿಮ್ಮನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ. ಪದವಿ ಪಡೆದರೆ ಸಾಧನೆ ಮಾಡಿದಂತಲ್ಲ. ಮುಂದೆ ಸಾಧಿಸಬೇಕಾಗಿರುವುದು ಸಾಕಷ್ಟು ಇವೆ. ವಿದ್ಯಾರ್ಥಿಗಳು ನಡೆದು ಬಂದ ಹಾದಿಯನ್ನು ಮರೆಯಬಾರದು. ಗುರಿಯನ್ನು ಇಟ್ಟುಕೊಂಡು ಸಾಧಿಸುವವರೆಗೂ ಸುಮ್ಮನಿರಬಾರದು. ಉತ್ತಮ ವ್ಯಕ್ತಿಗಳ ಜತೆ ಸಂಬಂಧ ಬೆಳೆಸಿಕೊಳ್ಳಬೇಕು. ಒಳ್ಳೆಯ ಹವ್ಯಾಸಗಳಿಂದ ಜೀವನ ಸುಂದರವಾಗಿರುತ್ತದೆ ಎಂದು ಹೇಳಿದರು.
ವಿವಿ ವರದಿ ಮಂಡಿಸಿದ ಕುಲಪತಿ ಪ್ರೊ. ಪ್ರಕಾಶ ತೇವರಿ, ಹುಬ್ಬಳ್ಳಿ ಬಿವಿಬಿ ಇಂಜಿನಿಯರಿಂಗ್ ಕಾಲೇಜ್, ಗೋಕುಲ ರಸ್ತೆ ಕೆಎಲ್​ಇ ಐಟಿ, ಬೆಳಗಾವಿಯ ಡಾ. ಎಂ. ಎಸ್. ಶೇಷಗಿರಿ ಇಂಜಿನಿಯರಿಂಗ್ ಕಾಲೇಜ್ ಹಾಗೂ ಬೆಂಗಳೂರಿನ ಕೆಎಲ್​ಇ ಕಾನೂನು ಕಾಲೇಜ್- ಈ ನಾಲ್ಕು ಕ್ಯಾಂಪಸ್​ಗಳಲ್ಲಿ 13 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 600 ಬೋಧಕ ಸಿಬ್ಬಂದಿ ಇದ್ದಾರೆ ಎಂದು ಹೇಳಿದರು.
ಕೆಎಲ್​ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ವಿವಿ ಕುಲಾಧಿಪತಿ ಡಾ. ಪ್ರಭಾಕರ ಕೋರೆ, ಸಮ ಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಕುಲಸಚಿವ ಡಾ. ಬಿ.ಎಲ್. ದೇಸಾಯಿ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಅನಿಲಕುಮಾರ ನಂದಿ, ಅಕಾಡೆಮಿಕ್ಸ್ ಡೀನ್ ಡಾ. ಬಿ.ಬಿ. ಕೊಟ್ಟರಶೆಟ್ಟರ ಇದ್ದರು.