kle hpv ಕೆಎಲ್​ಇ ಸಂಸ್ಥೆಯ ಎಚ್​ಪಿವಿ ವ್ಯಾಕ್ಸಿನೇಶನ್​ ಅಭಿಯಾನದಲ್ಲಿ ವೈದ್ಯಕಿಯ ತಂಡ ಅರ್ಹರಿಗೆ ಚುಚ್ಚುಮದ್ದು ನೀಡಿತು. 
ಧಾರವಾಡ

kle hpv ಕೆಎಲ್​ಇ ಸಂಸ್ಥೆಯಿಂದ ಎಚ್​ಪಿವಿ ಅಭಿಯಾನ

ಹುಬ್ಬಳ್ಳಿ: kle hpv ಕೆಎಲ್​ಇ ಸಂಸ್ಥೆಯ ಎಚ್​ಪಿವಿ ವ್ಯಾಕ್ಸಿನೇಷನ್​ ಅಭಿಯಾನದ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಿತು.
ಕೆಎಲ್​ಇ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ ಆಂಡ್​ ರೀಸರ್ಚ್​ ಕುಲಪತಿ ಡಾ. ಪ್ರಭಾಕರ ಕೋರೆ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಕೆಎಲ್​ಇ ಮತ್ತು ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಗಳ ಸಂಯೋಜಕಿ ಡಾ. ಪ್ರೀತಿ ದೊಡ್ಡವಾಡ ನೇತೃತ್ವದಲ್ಲಿ ಈ ಉಪಕ್ರಮಗಳನ್ನು ಕೈಗೊಳ್ಳಲಾಯಿತು.
ಬೆಳಗಾವಿಯ ಜೆಎನ್​ಎಂಸಿ ಸ್ತ್ರೀರೋಗ ತಜ್ಞೆ ಡಾ. ಸ್ವಾತಿ ಗೌಡರ, ಪ್ರಾಧ್ಯಾಪಕ ಡಾ. ಜ್ಞಾನೇಶ ಕಾಂಬಳೆ, ಡಾ. ಶ್ರೀಹರ್ಷ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಬೆಳಗಾವಿ ನಗರ, ಹುಬ್ಬಳ್ಳಿ, ಧಾರವಾಡ, ನಿಪ್ಪಾಣಿ, ಚಿಕ್ಕೋಡಿ ಮತ್ತು ಅಂಕಲಿಯ 9 ಕೆಎಲ್​ಇ ಸೊಸೈಟಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ದೀಪ್ತಿ ಕೋರೆ ಮತ್ತು ಬೆಂಗಳೂರಿನ ಗುಲಾಬ್​ ಸೇವಾ ಫೌಂಡೇಷನ್​ನವರು ಈ ಕಾರ್ಯಕ್ರಮಕ್ಕೆ ಬೆಂಬಲಿಸಿದರು. ವ್ಯಾಕ್ಸಿನೇಷನ್​ ಅನ್ನು ವಯಸ್ಸಿಗೆ ಸೂಕ್ತವಾದ ಡೋಸಿಂಗ್​ ವೇಳಾಪಟ್ಟಿಗಳ ಪ್ರಕಾರ ನಿರ್ವಹಣೆ ಮಾಡಲಾಯಿತು. 488 ಹುಡುಗಿಯರು, 29 ಹುಡುಗರು ಮತ್ತು 72 ವಯಸ್ಕ ಮಹಿಳೆಯರನ್ನು ಒಳಗೊಂಡಂತೆ ಒಟ್ಟು 589 ಫಲಾನುಭವಿಗಳನ್ನು ಎಚ್​ಪಿವಿ ಲಸಿಕೆಗಾಗಿ ಆಯ್ಕೆ ಮಾಡಲಾಯಿತು.
ಲಸಿಕೆ ಅವಧಿಗಳನ್ನು ಬೆಳಗಾವಿಯ ಕೆಎಲ್​ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕಿಯ ಸಂಶೋಧನಾ ಕೇಂದ್ರ ಮತ್ತು ಹುಬ್ಬಳ್ಳಿಯ ಕೆಎಲ್​ಇ ಜೆಜಿಎಂಸಿ ಆಸ್ಪತ್ರೆ ಆವರಣದಲ್ಲಿ ನಡೆಸಲಾಯಿತು.