kle fest ಪ್ಲೀಡಿಸ್ ಫೆಸ್ಟ್ ಉತ್ಸವದ ಮಾಹಿತಿ ಪತ್ರಿಕೆ.
- ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪ್ಲೀಡಿಸ್
- ರಾಷ್ಟ್ರ ಮಟ್ಟದ ತಂತ್ರಜ್ಞಾನ ಸಾಂಸ್ಕೃತಿಕ ಉತ್ಸವ
ಹುಬ್ಬಳ್ಳಿ: kle fest ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನ- ಸಾಂಸ್ಕೃತಿಕ ಉತ್ಸವ ಪ್ಲೀಡಿಸ್ 26 ಅನ್ನು ಮೇ 8ರಿಂದ 10ರ ವರೆಗೆ ವಿದ್ಯಾನಗರದ ಬಿವಿಬಿ ಆವರಣದಲ್ಲಿ ಆಯೋಜಿಸಲಾಗಿದೆ.
ಸಂಸ್ಥಾಪಕರಾದ ಬಿ.ವಿ. ಭೂಮರಡ್ಡಿ ಅವರ 141ನೇ ಜಯಂತಿಯ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮೂರು ದಿನಗಳ ಉತ್ಸವದಲ್ಲಿ ದೇಶದಾದ್ಯಂತ ವಿದ್ಯಾರ್ಥಿಗಳು, ಉದ್ಯಮಿಗಳು, ಕಲಾವಿದರು ಮತ್ತು ಉದ್ಯಮ ನಾಯಕರು ಒಂದೇ ವೇದಿಕೆಯಲ್ಲಿ ಸೇರಿ ಅವರ ಶಿಕ್ಷಣ ಮತ್ತು ಸೇವೆಯನ್ನು ಸ್ಮರಿಸಲಿದ್ದಾರೆ.
ಪ್ಲೀಡಿಸ್ ಉತ್ಸವವು ಕಲಿಕೆ, ಸ್ಪರ್ಧೆ, ಸಂಸ್ಕೃತಿ ಮತ್ತು ಸಂಭ್ರಮದ ಅಪೂರ್ವ ಸಂಗಮವಾಗಿ ರೂಪುಗೊಂಡಿದೆ. 13ಕ್ಕೂ ಹೆಚ್ಚು ಚಾಲೆಂಜ್ ಲೀಗ್ ಸ್ಪರ್ಧೆಗಳು, ಸ್ಪಿಂಟ್ ಕಾರ್ಯಾಗಾರಗಳು, ಸ್ಪಾಟ್ಲೈಟ್ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪೆವಿಲಿಯನ್ಗಳು ಒಂದೇ ಸೂರಿನಡಿ ನಡೆಯಲಿವೆ.
ಉತ್ಸವದಲ್ಲಿ 8 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲ ಸ್ಪರ್ಧೆಗಳಲ್ಲಿ ವಿಜೇತರಿಗೆ 5ಲಕ್ಷಕ್ಕೂ ಹೆಚ್ಚಿನ ಬಹುಮಾನ ನೀಡಲಾಗುತ್ತಿದೆ.
ಮೇ 8ರಂದು ಕೆಎಲ್ಇ ಟೆಕ್ ಸಭಾಂಗಣದಲ್ಲಿ ಉತ್ಸವ ಆರಂಭಗೊಳ್ಳಲಿದ್ದು, ಸೇನಾ ನಿವೃತ್ತ ಅಧಿಕಾರಿ, ನಾಯಕತ್ವ ತರಬೇತುದಾರ ಕರ್ನಲ್ ರಾಜೀವ್ ಭಾರ್ಗವ್ ಕಾರ್ಯಾಗಾರ ನಡೆಸಲಿದ್ದಾರೆ.
ಮೇ 10ರಂದು ಎರಡು ಅವಧಿಗಳೊಂದಿಗೆ ಸ್ಪ್ರಿಂಟ್ ಕಾರ್ಯಾಗಾರಗಳು ಸಮಾಪ್ತಿಗೊಳ್ಳಲಿವೆ. ಮುಂದೆ ಬನ್ನಿ ಸಂಸ್ಥಾಪಕ ವಸಂತ ಶೆಟ್ಟಿ ಅವರು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನಿರ್ಮಾಣ ಎಂಬ ಸ್ಟಾರ್ಟಪ್ ಕೇಂದ್ರಿತ ಕಾರ್ಯಾಗಾರ ನಡೆಸಲಿದ್ದಾರೆ.
ಜಿಮ್ಖಾನಾ ಮೈದಾನದಲ್ಲಿ ಸಾಂಸ್ಕೃತಿಕ ಸಂಜೆ ನಡೆಯಲಿವೆ. ಮೊದಲ ದಿನ ಆರ್ಕೆಸ್ಟ್ರಾ ಮತ್ತು ಎಲೆಕ್ಟ್ರಾನಿಕ್ ಸಮ್ಮಿಲನದ ಸಿಂಫನಿ; ಎರಡನೇ ದಿನ ಭಾರತದ ಜನಪ್ರಿಯ ಗಾಯಕಿ ಮೋನಾಲಿ ಠಾಕೂರ್ ಅವರ ಅವಿಸ್ಮರಣೀಯ ಲೈವ್ ಕಾರ್ಯಕ್ರಮ, ಮೂರನೇ ದಿನ ಸಮಾರೋಪ ಸಂಜೆ ಸ್ಪೆಕ್ಟ್ರಮ್ ಏರ್ಪಡಿಸಲಾಗಿದೆ.