ಕಿರೇಸೂರ kiresuru school ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಮಕ್ಕಳ ಬರಹಗಳ ಸಂಕಲನ ’ಅರಳೀಕಟ್ಟೆ- ಅರಿವಿನ ಮೂಟೆ’ ಬಿಡುಗಡೆಗೆ ಕಾರ್ಯಕ್ರಮದಲ್ಲಿ ಎಂಎಲ್‌ಸಿ ಪ್ರೊ.ಎಸ್.ವಿ. ಸಂಕನೂರ ಮಾತನಾಡಿದರು.  
ಧಾರವಾಡ

kiresuru school ಕಲಿಕೆಯ ಏಕತಾನತೆಯಿಂದ ಹೊರಬರಲು ಪರಿವರ್ತನೆ ಅಗತ್ಯ

ಹುಬ್ಬಳ್ಳಿ: ಅರಳೀಕಟ್ಟೆ ಗುರುಕುಲವನ್ನು

kiresuru school

ನೆನಪಿಸುವಂತಿದೆ. ಗುರುಕುಲದಲ್ಲಿ ಹಿಂದೆ ನಡೆಯುತ್ತಿದ್ದ ಜೀವನ ಪಾಠಗಳು ಇಲ್ಲಿ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ. ಕಲಿಕೆಯ ಏಕತಾನತೆಯಿಂದ ಹೊರಬರಲು ಇಂತಹ ಪರಿವರ್ತನೆಗಳು ಶಾಲೆಗಳಲ್ಲಿ ತರಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಇಲಾಖೆ, ಇಂಡಿಯಾ ಫಂಡೇಷನ್ ಫಾರ್ ಆರ್ಟ್ ಕಲಿ-ಕಲಿಸು ಸಹಯೋಗದಲ್ಲಿ ತಾಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲೆಯ ಅರಳೀಕಟ್ಟೆ ತೆರೆದ ವಾಚನಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಮಕ್ಕಳ ಬರಹಗಳ ಸಂಕಲನ ’ಅರಳೀಕಟ್ಟೆ- ಅರಿವಿನ ಮೂಟೆ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಕ್ಕಳ ಸಮಗ್ರ ವಿಕಾಸಕ್ಕೆ ಇಂತಹ ಪ್ರಯೋಗಗಳು ಬೇಕು. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವಲ್ಲಿ ಈ ಕೃತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ. ಸಂಕನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಒಬ್ಬ ಶಿಕ್ಷಕ ಟೊಂಕ ಕಟ್ಟಿ ನಿಂತರ ಇಡೀ ಸಮುದಾಯವನ್ನು ಬದಲಿಸಬಹುದು ಎನ್ನುವುದಕ್ಕೆ ಅರಳೀಕಟ್ಟೆ ತೆರೆದ ವಾಚನಾಲಯ ಒಂದು ನಿದರ್ಶನ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಸಂಜೀವ ತಿರ್ಲಾಪೂರ, ಗ್ರಾಪಂ ಅಧ್ಯಕ್ಷ ಬಿ.ಕೆ. ಪಾಟೀಲ, ಸದಸ್ಯರಾದ ಎಚ್.ಎಸ್. ರಾಯನಗೌಡ್ರ, ಪ್ರಭು ತಿರ್ಲಾಪೂರ, ವೈ.ಎಸ್. ರೇವಡಿಹಾಳ, ಮಂಜುನಾಥ ಹುಬ್ಬಳ್ಳಿ, ಲಕ್ಷ್ಮಣ ಸತ್ತೆಮ್ಮನವರ, ಸೋಮಣ್ಣ ಕಮಡೊಳ್ಳಿ, ಬಸವನಗೌಡ ಮರಿಗೌಡ್ರ, ಡಿಡಿ ಕ್ಲಿಕ್ ಸಂಸ್ಥೆಯ ಮಾಣಿಕ ಝರಾಲ್ಡ್, ಶಿಕ್ಷಕ ಸಂಘದ ಪ್ರತಿನಿಧಿಗಳಾದ ವೈ.ಎಚ್. ಬಣವಿ, ಧರ್ಮಣ್ಣ ನಾವಳ್ಳಿ, ಜಿ.ಎಸ್. ಕೊಣ್ಣೂರ, ಸಂಜೀವಕುಮಾರ ಭೂಶೆಟ್ಟಿ, ಮಂಗಳಾ ಕಮ್ಮಾರ, ವಕೀಲೆ ಸವಿತಾ ಪಾಟೀಲ, ಸುನಿಲ ಗಣಿ ಇತರರಿದ್ದರು.
ಮುಖ್ಯಗುರು ಮಾತೆ ಸುಮನ ತೇಲಂಗ ಸ್ವಾಗತಿಸಿದರು. ಶಿಕ್ಷಕ ಡಾ. ಲಿಂಗರಾಜ ರಾಮಾಪೂರ ನಿರ್ವಹಿಸಿದರು. ಶಿಕ್ಷಕ ಅರ್ಜುನ ಅಂಗಡಿ ವಂದಿಸಿದರು.